ಯಳಂದೂರು: ಯಳಂದೂರು ತಾಲ್ಲೋಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯವತಿಯಿಂದ ತಾಲ್ಲೋಕು ಪಂಚಾಯಿತಿ ಸಭಾಂಗಣದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ರವರ 118 ನೇ ಜನ್ಮ ದಿನಾವನ್ನು ಆಚರಣೆ ಮಾಡಲಾಯಿತು.
ಕೊಳ್ಳೇಗಾಲ ವಿಧಾನಸಭಾ ಸಭಾ ಕ್ಷೆತ್ರದ ಶಾಸಕರಾದ ಎ ಆರ್. ಕೃಷ್ಣ ಮೂರ್ತಿ ರವರು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಸಕರಾದ ಎ ಆರ್ ಕೃಷ್ಣ ಮೂರ್ತಿ ರವರು ಮಾತನಾಡಿ ದೇಶದ ಮೊದಲನೆಯ ದಲಿತ ಉಪ ಪ್ರಧಾನ ಮಂತ್ರಿಗಳಾಗಿ ಕಾರ್ಮಿಕರ ಸಚಿವರಾಗಿ ಹಾಗೂ ರೈಲ್ವೆ ಖಾತೆ ಸಚಿವರಾಗಿ ಈ ದೇಶಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಕಾರ್ಮಿಕರ ಸಚಿವರಾಗಿದ್ದಾಗ 12 ಗಂಟೆಗಳ ಕೆಲಸ ಮಾಡುವ ಪರಿಸ್ಥಿತಿ ಇತ್ತು ಅಂದು ಬದಲಾಯಿಸಿ ಎಂಟು ಗಂಟೆವರೆಗೆ ಸಮಯ ನಿಗದಿ ಮಾಡಿದ ಮುತ್ಸದ್ದಿ ನಾಯಕ ಜಗಜೀವನ್ ರಾಮ್. ನೀರಾವರಿ, ಶೈಕ್ಷಣಿಕ, ಸಾಮಾಜಿಕ ಆರ್ಥಿಕವಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಈ ದೇಶದ ಎಲ್ಲ ಬಡ ಜನರ ಬದುಕು ಕಟ್ಟಿಕೊಳ್ಳಲು ಶ್ರಮಿಸಿದರೆ ಎಂದು ತಿಳಿಸಿದರು.
ಶ್ರೀಮತಿ ಲಕ್ಷ್ಮೀ, ಶ್ರೀಮತಿ ಶಾಂತಮ್ಮ,ಕಿನಕಹಳ್ಳಿ ಪ್ರಭುಪ್ರಸಾದ್, ಬಸವರಾಜು ತಹಸೀಲ್ದಾರ್,ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮಾರಯ್ಯ, ಸಹಾಯಕ ನಿರ್ದೇಶಕರಾದ ಕೇಶವಮೂರ್ತಿ,ಸಿ ಆರ್ ಪಿ ರೇಚಣ್ಣ ಪಟ್ಟಣ ಪಂಚಾಯಿತಿ ಸದಸ್ಯರಾದ ರಂಗನಾಥ್, ಲಿಂಗರಾಜ ಮೂರ್ತಿ ಸಿಡಿಪಿಒ ಸಕಲೇಶ್ವರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ