Ad imageAd image

ಸರ್ಕಾರಿ ತಾಯಿ ,ಮಕ್ಕಳ ಹೊಸ ಆಸ್ಪತ್ರೆ ಕಟ್ಟಡ ಗುಣ ಮಟ್ಟದಿಂದ ನಿರ್ಮಿಸಿಕೊಳ್ಳುವಲ್ಲಿ ಆರೋಗ್ಯ ಇಲಾಖೆ ಅಧಿಕಾರಿ,ವಿಫಲರಾದರೇ..

Bharath Vaibhav
ಸರ್ಕಾರಿ ತಾಯಿ ,ಮಕ್ಕಳ ಹೊಸ ಆಸ್ಪತ್ರೆ ಕಟ್ಟಡ ಗುಣ ಮಟ್ಟದಿಂದ ನಿರ್ಮಿಸಿಕೊಳ್ಳುವಲ್ಲಿ ಆರೋಗ್ಯ ಇಲಾಖೆ ಅಧಿಕಾರಿ,ವಿಫಲರಾದರೇ..
WhatsApp Group Join Now
Telegram Group Join Now

ಖಾನಾಪುರ:-  ಕಳಪೆ ಮಾಡಿ ಕಮಿಷನ್ ಹೊಡೆದು ಉಂಡು ತಿಂದು ತೇಗಿದರೇ ಗುತ್ತಿಗೆದಾರ ಮತ್ತು ಅಭಿಯಂತರರು….!

 

ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ದೊಡ್ಡ ಭೌಗೋಳಿಕ ತಾಲ್ಲೂಕು ಅಂದ್ರೇ ಇದೇ ನೋಡ್ರಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕು. ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರಂತರ ಹೋರಾಟದ ಫಲವಾಗಿ ಖಾನಾಪುರ ತಾಲ್ಲೂಕಿನ 260 ಹಳ್ಳಿಗಳ ಸಮಸ್ತ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಕಳೆದ ಸರ್ಕಾರದ ಅವಧಿಯಾದ 2022 ವರ್ಷದಲ್ಲಿ ಅಂದಾಜು 15 ಕೋಟಿ ವೆಚ್ಚದಲ್ಲಿ ಸರ್ಕಾರಿ ತಾಯಿ ಮತ್ತು ಮಕ್ಕಳ 60 ಹಾಸಿಗೆಗಳ ಹೊಸ ಆಸ್ಪತ್ರೆಯ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ಪ್ರಾರಂಭ ಮಾಡಲಾಗಿದ್ದು ಸದರಿ ಈ ಕಾಮಗಾರಿಯನ್ನು ದಾವಣಗೆರೆ ಮೂಲದ ಸುರೇಶ್ ನೇಕಟ್ಟಿ ಎಂಬ ಗುತ್ತಿಗೆದಾರ ಕಾರ್ಯ ನಿರ್ವಹಣೆ ಮಾಡಿದ್ದು ಆರೋಗ್ಯ ಇಲಾಖೆ ಅಭಿಯಂತರರ ಸುಪರ್ದಿಯಲ್ಲಿ ಕಾಮಗಾರಿ ನಡೆಯಿತು.

ಸದರಿ ಕಾಮಗಾರಿಯು ಕಳೆದ 2023 ಮಾರ್ಚ್ ನಲ್ಲಿ ಪೂರ್ಣಗೊಂಡಿದೆ ಅಂತಾ ಹೇಳಿ ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡಿ ಕೈ ತೊಳೆದುಕೊಂಡು ಬಿಟ್ಟಿದ್ದಾರೆ. ಇನ್ನೂ ಚುನಾವಣೆ ನೀತಿ ಸಂಹಿತೆ ನಂತರ ಇದನ್ನು ಉದ್ಘಾಟನೆ ಮಾಡಿ ಕಾರ್ಯರಂಭ ಮಾಡೋದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡು ನಿನ್ನೆಯಿಂದ ಈ ಹೊಸ ಕಟ್ಟಡವನ್ನು ನೀರಿನಲ್ಲಿ ತೊಳೆದು ಸ್ವಚ್ಛವೇನೋ ಮಾಡ್ತಾ ಇದ್ದಾರೆ. ಆದ್ರೇ ನಿನ್ನೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಈ ಹೊಸ ಕಟ್ಟಡವನ್ನು ಒಂದು ರೌಂಡ್ ಹಾಕಿದಾಗಲೇ ಗೊತ್ತಾಗಿದ್ದು ನೋಡ್ರಿ ಇನ್ನೂ ಇಲ್ಲಿ ಕಾಮಗಾರಿ ಕೆಲಸಗಳು ಆಗೇ ಉಳಿದಿವೆ ಹಾಗೂ ಕಳಪೆ ಮಟ್ಟದ ಸಲಕರಣೆಗಳನ್ನು ಹಾಕಿ ಕೈ ತೊಳೆದುಕೊಂಡು ಬಿಟ್ಟರೇ ಅನಿಸುತ್ತಾ ಇದೆ.

ಇನ್ನೂ ಇಲ್ಲಿ ಮುಖ್ಯವಾಗಿ 2 ಮತ್ತು 3ನೇ ಮಹಡಿಯಿಂದ 4 ನೇ ಮಹಡಿಗೆ ರೋಗಿಗಳನ್ನು ಗಾಡಿಯಲ್ಲಿ ಸಾಗಿಸುವುದಕ್ಕೆ ನಿರ್ಮಾಣ ಮಾಡಲಾದ ಕಾರಿಡಾರ್ ಗೇ ಸಿಮೆಂಟ್ ಪ್ಲಾಸ್ಟಿಂಗ್ ಮಾಡಿಲ್ಲಾ, ಮತ್ತು ನೆಲ ಹಾಸು ಸಹ ಹಾಕಿಲ್ಲ ಮತ್ತು 4 ನೇ ಮಹಡಿಯ ಮೇಲ್ಛಾವಣಿಯಲ್ಲಿ ಸಿಮೆಂಟ್ ಪ್ಲಾಸ್ಟಿಂಗ್ ಮಾಡದೇ ಇರುವುದು ಹಾಗೂ ಮೇಲ್ಚಾವಣಿಯಲ್ಲಿ ಅಳವಡಿಸಿರುವ ತಾಡಪತ್ರಿಗಳಲ್ಲಿ ಕುಳಿಗಳು ಆಗಿದ್ದು,ಕಳಪೆ ಮಟ್ಟದ ಸಲಕರಣೆಗಳನ್ನು ಅಳವಡಿಸಿದ್ರೆ ಎಂಬ ಸಂಶಯ ಕಾಡುತ್ತಿದೆ.

ಇನ್ನೂ ಆಸ್ಪತ್ರೆಯ ಮುಖ್ಯ ದ್ವಾರದಲ್ಲೇ ಸಂಪೂರ್ಣವಾಗಿ ರಸ್ತೆ ಹಾಗೂ ಸಿಮೆಂಟ್ ಕಾಂಕ್ರೀಟ್ ಕಿತ್ತುಹೋಗಿದೆ. ಇದರಿಂದ ತುರ್ತು ವಾಹನಗಳು ಸರಾಗವಾಗಿ ಬರುವುದಕ್ಕೆ ತುಂಬಾನೇ ತೊಂದರೆ ಆಗೋ ಪರಿಸ್ಥಿತಿ ಬರಬಹುದು. ಇನ್ನೂ ಈ ಆಸ್ಪತ್ರೆಯಲ್ಲಿ ಅಳವಡಿಸಿರುವ ವೈರಿಂಗ್ ಕೇಬಲ್ ಗಳನ್ನು ಜೋತು ಹಾಕಿ ಸಂಪರ್ಕ ಮಾಡಿದ್ದಾರೆ. ಇದರಿಂದ ಯಾವ ಕ್ಷಣದಲ್ಲಾದ್ರೂ ವಿದ್ಯುತ್ ಸಂಪರ್ಕ ಕಡಿತ ಗೊಳ್ಳುವ ಸಂಭವ ವಿರುತ್ತದೆ. ಇನ್ನೂ ಎಲ್ಲಾ ಕಿಟಕಿಗಳಲ್ಲಿ ಸಂಪೂರ್ಣವಾಗಿ ಸಿಮೆಂಟ್ ಹಾಕದೇ ಕಚ್ಚಾ ಕಾಮಗಾರಿ ಮಾಡಿದ್ದಾರೆ.

ಇನ್ನೂ ಈ ಆಸ್ಪತ್ರೆಯ ನಿರ್ವಹಣೆ ವಿಷಯಕ್ಕೆ ಬಂದಾಗ ಬೇಕಾದ ಅಗತ್ಯ ಪೀಠೋಪಕರಣಗಳು, ತುರ್ತು ನಿಗಾ ಘಟಕಗಳು, ನೂತನ ತಂತ್ರಜ್ಞಾನದ ಸಾಮಗ್ರಿಗಳು, ಹಾಗೂ ಅಗತ್ಯ ಸಿಬ್ಬಂದಿಗಳು, ವೈದ್ಯರು ಸಹ ಇಲ್ಲದೇ ಇರುವುದು ಒಂದು ಕಡೆಯ ಸಮಸ್ಯೆ. ಇನ್ನೂ ಇಷ್ಟೆಲ್ಲಾ ಸಣ್ಣ ಪುಟ್ಟ ಕಾಮಗಾರಿ ಕೆಲಸಗಳು ಬಾಕಿ ಉಳಿದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಸಮಸ್ಯೆಗಳನ್ನು ಏನು ಪರಿಶೀಲನೆ ಮಾಡದೇ ತುರ್ತಾಗಿ ಇದನ್ನು ಹಸ್ತಾಂತರ ಮಾಡಿಕೊಳ್ಳುವುದಕ್ಕೆ ರಾಜಕೀಯ ಒತ್ತಡಗಳು ಕಾರಣವಾದವೇ ಎಂಬ ಸಂಶಯಗಳು ಕಾಡುತ್ತಿವೆ.

ಈ ಕಟ್ಟಡ ನಿರ್ಮಾಣದ ಹೆಸರಿನಲ್ಲಿ ನಿರ್ವಹಣೆ ಮಾಡಿದ ಗುತ್ತಿಗೆದಾರ, ಅಭಿಯಂತರರು , ಅಧಿಕಾರಿಗಳು ಕಮಿಷನ್ ರೂಪದಲ್ಲಿ ಉಂಡು ತಿಂದು ತೇಗಿದ್ದಾರಂತೆ. ಆದ್ದರಿಂದ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿ ಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಆದ ಡಾ. ಮಹೇಶ್ ಕೋಣೆ ಅವರೊಂದಿಗೆ ಅಭಿಪ್ರಾಯ ಸಂಗ್ರಹ ಮಾಡಿ ಆರೋಗ್ಯ ಇಲಾಖೆ ಸಚಿವಾಲಯ ಕಾರ್ಯಾಲದ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಹೊಸ ಸರ್ಕಾರಿ ಆಸ್ಪತ್ರೆಗೆ ಪರಿಪೂರ್ಣ ಕಾಮಗಾರಿ ಕಾಯಕಲ್ಪ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.

ವರದಿ:-  ಬಸವರಾಜು. 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!