ಇಟಗಿ ಕ್ರಾಸ್: ರಾಜ್ಯ ಸರ್ಕಾರದ ಅತ್ಯಂತ ಪ್ರಮುಖ ಇಲಾಖೆ ಗಳಲ್ಲಿ ಇಂಧನ ಇಲಾಖೆ ಸಹ ಒಂದು. ಪ್ರತಿ ಮನೆ ಮನೆಯಿಂದ ಪ್ರತಿಯೊಂದು ಕೆಲಸಕ್ಕೂ ಇದೇ ಇಲಾಖೆಯೇ ವಿದ್ಯುತ್ ಸಂಪರ್ಕ ಕಲ್ಪಿಸೋದು. ಆದ್ರೆ ಅದ್ಯಾಕೋ ಏನೋ ಗೊತ್ತಾಗುತ್ತಿಲ್ಲಾ ಇಂಧನ ಇಲಾಖೆಯ ಪ್ರಮುಖ ಅಂಗ ಸಂಸ್ಥೆ ಹೆಸ್ಕಾಂ. ಈ ಹೆಸ್ಕಾಂ ವಿದ್ಯುತ್ ಸಂಸ್ಥೆಯ ವ್ಯಾಪ್ತಿಯ ಅದೆಷ್ಟೋ ಉಪ ವಿಭಾಗಗಳ ಕಚೇರಿ ಹಾಗೂ ಶಾಖಾಧಿಕಾರಿಗಳ ದುಸ್ಥಿತಿ ತುಂಬಾ ಶೋಚನೀಯವಾಗಿದೆ.
ಇದಕ್ಕೆ ಸ್ಪಷ್ಟ ಉಧಾಹರಣೆ ಎಂಬಂತೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದ ಕಿತ್ತೂರು ಹೆಸ್ಕಾಂ ವಿದ್ಯುತ್ ಕಚೇರಿ ಉಪ ವಿಭಾಗದ ವ್ಯಾಪ್ತಿಗೆ ಬರುವ ಇಟಗಿ ಕ್ರಾಸ್ ನಲ್ಲಿರುವ Mk ಹುಬ್ಬಳ್ಳಿ ಶಾಖಾಧಿಕಾರಿಗಳ ಕಚೇರಿಗೆ ಭೇಟಿಕೊಟ್ಟು ಅಲ್ಲಿನ ದುಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಒಂದು ಕಡೆ ಈ ಕಚೇರಿಯು ತುಂಬಾ ಹಳೆಯದಾಗಿದ್ದು ಪ್ರಸ್ತುತ ಮಳೆಗಾಲವಾಗಿರುವುದರಿಂದ ಈ ಕಚೇರಿಯು ಸಂಪೂರ್ಣವಾಗಿ ಸೋರುತ್ತಿದೆ. ಇನ್ನೊಂದು ಕಡೆ ಈ ಕಚೇರಿಗೆ ಸಂಪೂರ್ಣವಾಗಿ ಗೆದ್ದಲು ಹಿಡಿದಿದ್ದು, ಪೇಪರ್ ನಲ್ಲಿ ಸಂಗ್ರಹಿಸಿಟ್ಟ ಎಲ್ಲಾ ದಾಖಲೆಗಳು ಗೆದ್ದಲು ಹುಳುಗಳ ಪಾಲಾಗುತ್ತಿವೆ.
ಇನ್ನೂ ತೀವ್ರ ಮಳೆಗೆ ಮೇಲ್ಛಾವಣಿ ಕುಸಿಯುವ ಪರಿಸ್ಥಿತಿ ಇದೆ. ಇಷ್ಟೆಲ್ಲಾ ಸಮಸ್ಯೆ ಆದ್ರೂ ಸಹ ಇಲ್ಲೇ ಇಲ್ಲಿನ ಶಾಖಾಧಿಕಾರಿಗಳು ಹಾಗೂ ಕಂಪ್ಯೂಟರ್ ಆಪರೇಟರ್ ಗಳು ಕಾರ್ಯ ನಿರ್ವಹಣೆ ಮಾಡ್ತಾ ಇದ್ದು ಈ ಸಮಸ್ಯೆ ಬಗ್ಗೆ ಯಾರಿಗೂ ಹೇಳಲಾಗದೇ ಕೇಳಲಾಗದೇ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿದ್ದಾರೆ. ಆದ್ದರಿಂದ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಹೆಸ್ಕಾಂ ನಿಗಮದ ಹಾಲಿ ಅಧ್ಯಕ್ಷರು ಆದ ಸೈಯದ್ ಅಜೀಮಪೀರ್ ಖಾದ್ರಿ ಅವರ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದರೂ ಈ ತುಂಬಾನೇ ಶಿಥಿಲಗೊಂಡಿರುವ ಈ ವಿದ್ಯುತ್ ಶಾಖೆಯ ಕಚೇರಿಗೆ ಕಾಯಕಲ್ಪ ಸಿಗುವುದೇ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಬಸವರಾಜು




