ಕೆಜಿಎಫ್ ಚಿತ್ರ ಸರಣಿಯ ಮೂಲಕ ವಿಶ್ವವ್ಯಾಪಿ ಹೆಸರು ಮಾಡಿದ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್‌ಗೆ ಇಂದು ( ಜನವರಿ ೮ ) ಹುಟ್ಟುಹಬ್ಬದ ಸಂಭ್ರಮ. ಈ ಸಲುವಾಗಿ ಇಂದು ಯಶ್ ನಟನೆಯ ಮುಂದಿನ ಚಿತ್ರ ಟಾಕ್ಸಿಕ್ ಚಿತ್ರತಂಡ ವಿಶೇಷ ಟೀಸರ್ ಒಂದನ್ನು ಬಿಡುಗಡೆ ಮಾಡಿದೆ.
ಚಿತ್ರದಲ್ಲಿ ನಟಿಸುತ್ತಿರುವ ಎಲ್ಲ ನಟಿಯರ ಪಾತ್ರ ಪರಿಚಯವನ್ನು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಘೋಷಿಸಿದ್ದ ಟಾಕ್ಸಿಕ್ ಚಿತ್ರತಂಡ ಯಶ್ ಪಾತ್ರವನ್ನು ಹುಟ್ಟುಹಬ್ಬದ ದಿನದಂದು ಬಿಡುಗಡೆಯಾದ ಈ ಟೀಸರ್ ಮೂಲಕ ಹೊರಹಾಕಿದೆ.
ಚಿತ್ರದಲ್ಲಿ ಯಶ್ ರಾಯ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇಲ್ಲೂ ಸಹ ಯಶ್ ರಗಡ್ ಆಗಿದ್ದಾರೆ. ಕ್ವಾಲಿಟಿ, ಮೇಕಿಂಗ್ ವಿಷಯದಲ್ಲಿ ಕೆಮ್ಮಲೂ ಸಹ ಆಗದ ಮಟ್ಟಕ್ಕೆ ಟೀಸರ್ ಮೂಡಿಬಂದಿದ್ದು, ಈ ವಿಷಯವಾಗಿ ಟೀಸರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
ಆದರೆ ಟೀಸರ್‌ನ ಆ ತುಣುಕು ಮಾತ್ರ ಟೀಕೆಗೆ ಗುರಿಯಾಗಿದೆ. ಹೌದು, ಯಶ್ ಟೀಸರ್‌ನಲ್ಲಿ ಎಂಟ್ರಿ ಕೊಡುವುದಕ್ಕೂ ಮುನ್ನ ಯುವತಿ ಜತೆ ಕಾರಿನಲ್ಲಿ ಇರುವ ದೃಶ್ಯದ ಕುರಿತು ನೆಗೆಟಿವ್ ಕಾಮೆಂಟ್‌ಗಳು ಜೋರಾಗಿ ಕೇಳಿಬರುತ್ತಿವೆ. ಚಿತ್ರದಲ್ಲಿ ಯಶ್ ಪ್ಲೇ ಬಾಯ್ ಆಗಿ ಕಾಣಿಸಿಕೊಂಡಿದ್ದು, ಇದನ್ನು ಪ್ರೇಕ್ಷಕರಿಗೆ ತಿಳಿಸಲು ಯತ್ನಿಸಿರುವ ದೃಶ್ಯ ಫ್ಯಾಮಿಲಿ ಆಡಿಯನ್ಸ್ ವಿರೋಧಕ್ಕೆ ಕಾರಣವಾಗಿದೆ.
ಚಿತ್ರದ ಟೀಸರ್ ನೋಡಿದ ಬಹುತೇಕರು ಅದ್ಬುತ ಟೀಸರ್‌ನಲ್ಲಿ ಆ ಒಂದು ಸೀನ್ ಬೇಕಿತ್ತಾ ಎಂದು ಪ್ರಶ್ನಿಸತೊಡಗಿದ್ದಾರೆ. ಇನ್ನು ನೆಟ್ಟಿಗರು ಆ ದೃಶ್ಯಕ್ಕೆ ಯಶ್ ಹಿಂದಿನ ಚಿತ್ರಗಳ ದೃಶ್ಯಗಳನ್ನು ಹೋಲಿಸಿ ಕಾಮೆಂಟ್ ಮಾಡಿದ್ದಾರೆ.




