ಬೆಳಗಾವಿ : –ಮಹಾನಗರ ಪಾಲಿಕೆ ಮೇಲೆ ಲೋಕಯುಕ್ತ ಅಧಿಕಾರಿಗಳು ದಿಡಿರ್ ದಾಳಿ ನಡೆಸಿ ವಿವಿಧ ದಾಖಲೆಗಳನ್ನು ಪರಿಶೀಲಿಸಿದ್ದಾರೆ ಇಂದು ಬೆಳಿಗ್ಗೆ ಲೋಕಾಯುಕ್ತ ಎಸ್ಪಿ ಹಣಮಂತರಾಯ್ ನೇತೃತ್ವದಲ್ಲಿ 10ಕ್ಕೂ ಹೆಚ್ಚಿನ ಸಿಬ್ಬಂದಿಗಳು ದಾಳಿ ನಡೆಸಿದರು.
ಸಾರ್ವಜನಿಕರ ಕೆಲಸ, ಕಾರ್ಯಗಳು ವಿಳಂಬ ಆಗುತ್ತಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ದಾಳಿ ನಡೆದಿದ್ದು ಪಾಲಿಕೆಯ ಜನನ-ಮರಣ ಪ್ರಮಾಣ ಪತ್ರ ವಿತರಣೆ ಕೇಂದ್ರ, ತೆರಿಗೆ ಪಾವತಿ ಕೇಂದ್ರ, ಪರಿಸರ, ಆರೋಗ್ಯ, ಶಿಕ್ಷಣ, ಇಂಜಿನಿಯರಿಂಗ್ ವಿಭಾಗಳ ದಾಖಲೆ ಸಂಗ್ರಹಿಸಿದ್ದಾರೆ.
ವರದಿ ಪ್ರತೀಕ ಚಿಟಗಿ