ಮಾನ್ವಿ: ಸರಕಾರ ಜನಪರ ಯೋಜನೆಗಾಗಿ ಬದ್ಧವಾಗಿದ್ದರಿಂದ ಮಾನ್ವಿಯಲ್ಲಿ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಡಿಗ್ರಿ ಕಾಲೇಜು ಆವರಣದಲ್ಲಿ ಆರೋಗ್ಯ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಶಾಸಕ ಹಂಪಯ್ಯ ನಾಯಕ ಹಾಗು ಈ ಭಾಗದ ಸಚಿವ ಎನ್.ಎಸ್.ಬೋಸರಾಜು ಅವರು ನಮ್ಮ ಜೊತೆ ಸಂಪರ್ಕ ಮಾಡಿ ಮಾನ್ವಿ ತಾಲೂಕಲ್ಲಿ ಆರೋಗ್ಯ ಮೇಳ ಹಮ್ಮಿಕೊಳ್ಳಿ ಎಂದು ಕೇಳಿದ್ದರಿಂದ ಸರಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.
ಆರೋಗ್ಯ ಮೇಳದಲ್ಲಿ ತಜ್ಞ ವೈದ್ಯರು ಭಾಗವಹಿಸಿದ್ದು, ಆಯಾ ಚಿಕಿತ್ಸೆಗೆ ಸಲಹೆಯಂತೆ ಮಾಹಿತಿ ಪಡೆದು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜನರು ಆರೋಗ್ಯವಾಗಿ ಇರಬೇಕು ಎಂದು ಸರಕಾರ ಬಯಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ ಕುಮಾರ್ ನಾಯಕ್ ಜಿಲ್ಲೆಯ ಜಿಲ್ಲಾಧಿಕಾರಿಗಳು K. ನಿತೀಶ್ ಜಿಲ್ಲಾ ಪಂಚಾಯತ್ CEO ರಾಹುಲ್ ತುಕಾರಾಂ ಅನೇಕ ಗಣವನ್ನರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿದರು.
ವರದಿ: ಶಿವ ತೇಜ
ಭರತ್ ವೈಭವ್ ನ್ಯೂಸ್ ಮಾನ್ವಿ




