Ad imageAd image

ನವೋಲ್ಲಾಸದ ಜೀವನ ನಡೆಸಲು ಶಿಬಿರ ಸಹಕಾರಿ: ದಿನೇಶ ಪೂಜಾರಿ

Bharath Vaibhav
ನವೋಲ್ಲಾಸದ ಜೀವನ ನಡೆಸಲು ಶಿಬಿರ ಸಹಕಾರಿ: ದಿನೇಶ ಪೂಜಾರಿ
WhatsApp Group Join Now
Telegram Group Join Now

ಭಾಲ್ಕಿ: ವ್ಯಸನಗಳಿಗೆ ದಾಸರಾದಂತಹವರು ನವೋಲ್ಲಾಸದÀ ಜೀವನ ನಡೆಸಲು ಮಧ್ಯವರ್ಜನ ಶಿಬಿರ ಸಹಕಾರಿಯಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದಿನೇಶ ಪೂಜಾರಿ ಹೇಳಿದರು.
ಪಟ್ಟಣದ ಕುಂಬಾರ ಗುಂಡಯ್ಯಾ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ನವಜೀವನ ಸಮಿತಿ ರಚನೆ ಮತ್ತು ಆತ್ಮಾವಲೋಕನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಬಿರಕ್ಕೆ ಆಗಮಿಸಿ ಹೊಸ ಜೀವನ ನಡೆಸಲು ಬಂದಿರುವ ಎಲ್ಲಾ ಶಿಬಿರಾರ್ಥಿಗಳು ಉತ್ತಮ ಜೀವನ ನಡೆಸಲು ಮುನ್ನುಡಿ ಬರೆಯಬೇಕು.

ಕುಡಿತ ಎನ್ನುವುದು ಮಾರಕ ರೋಗವಾಗಿದೆ. ಮಾಡಿದ ತಪ್ಪನ್ನು ತಿದ್ದುಕೊಳ್ಳುವುದಕ್ಕೆ ಶಿಬಿರಾಧಿಕಾರಿಗಳು ನೀಡಿದ ಮಾರ್ಗದರ್ಶನ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಿರೆಂದು ನಂಬಿರುವೆ. ಮುಂದೆ ನೀವು ನಿಮ್ಮ ಮನೆಗೆ ಹೋದ ನೊಂತರ ಕುಡಿತ ಬಿಡುತ್ತೇನೆ ಎನ್ನುವ ಗಟ್ಟಿ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು. ೧೯೯೫ನೇ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಬಾಷ ಹುಲಸೂರೆ ಮಾತನಾಡಿ, ನಿಮಗೆ ಯಾವುದೇ ಸಮಸ್ಯೆ ಬಂದರು ಅದಕ್ಕೆ ಪರಿಹಾರ ಕಂಡುಕೊಳ್ಳಿ, ಹೊರತು ಮಧ್ಯಪಾನ ಮಾಡುವುದರಿಂದ ಯಾವುದೇ ಸಮಸ್ಯ ಪರಿಹರಿಸಲು ಸಾಧ್ಯವಿಲ್ಲ ಎನ್ನುವುದು ಅರಿತು ಜೀವನ ಸಾಗಿಸಿ ಎಂದು ಹೇಳಿದರು.

ಕೇಂದ್ರ ಕಚೇರಿ ಶುದ್ಧಗಂಗಾ ಯೋಜನಾಧಿಕಾರಿ ಫಕೀರಪ್ಪ ಬೆಲ್ಲಾಮುದ್ದಿ ಮಾತನಾಡಿ, ನಿಮ್ಮ ಪುಣ್ಯದ ಫಲದಿಂದಲೇ ಇಂತಹ ಶಿಬಿರದಲ್ಲಿ ಪಾಲ್ಗೊಳ್ಳಲು ನಿಮಗೆ ಅವಕಾಶ ದೊರೆತಿದೆ. ಹೀಗಾಗಿ ನೀವೆಲ್ಲರೂ ಈ ಶಿಬಿರದ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು. ಶಿಬಿರಾಧಿಕಾರಿ ಕುಮಾರ.ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಜನಜಾಗೃತಿ ಮಾಧ್ಯಮ ಸಲೆಹಗಾರರಾದ ಸಂತೊಷ ಬಿಜಿ ಪಾಟೀಲ, ತಾಲೂಕು ಯೋಜನಾಧಿಕಾರಿ ಸಂತೋಷ ನಾಯಕ, ಪ್ರಮುಖರಾದ ಶಿವಾನಂದ ಲಕಾಟಿ, ರಾಜು. ಪಿ, ಸೇವಾ ಪ್ರತಿನಿಧಿ ಪ್ರೆಸಿಲ್ಲ ಡಿಸೋಜ, ನಿರಂಜಪ್ಪ ಪಾತ್ರೆ, ಪಿ.ಕೆ.ಪಲ್ಲವಿ, ಶ್ರೀಕಾಂತ ಸೇಗುಣಸಿ, ವೀರಭದ್ರ ಹಲಬುರ್ಗೆ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಉಪಸ್ಥಿತರಿದ್ದರು. ವೀರೇಶ ಸ್ವಾಗತಿಸಿದರು. ಸಂತೋಷಕುಮಾರ ನಿರೂಪಿಸಿದರು. ಶಿವಾನಂದ ವಂದಿಸಿದರು.

ವರದಿ: ಸಂತೋಷ ಬಿಜಿ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!