ಗದಗ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಮಠಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಉಚಿತ ಯೋಜನೆಗಳಿಂದ ಮಠದ ಖರ್ಚಿಗೆ ಹೊರೆಯಾಗಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಗದಗ ವಿರೇಶ್ವರ ಪುಣ್ಯಾಶ್ರಮದಲ್ಲಿ ಪುಟ್ಟರಾಜ ಗವಾಯಿ, ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಜಾತ್ರೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ಗ್ಯಾರಂಟಿಯಿಂದ ಜನ ಬಂದು ಆಶ್ರಮದಲ್ಲಿ ಊಟ ಮಾಡುತ್ತಿದ್ದಾರೆ.ಮಠದಲ್ಲಿ ಊಟ ಮಾಡುವವರ ಸಂಖ್ಯೆ ನೂರು ಪಟ್ಟು ಹೆಚ್ಚಾಗಿದೆ ಎಂದರು.
ಉಚಿತ ಯೋಜನೆಗಳು ಮಠದ ಖರ್ಚಿಗೆ ಹೊರೆಯಾಗಿವೆ. ಪ್ರಸಾದ ವ್ಯವಸ್ಥೆ ನೂರು ಪಟ್ಟು ಹೆಚ್ಚಾಗಿದೆ. ಸರ್ಕಾರ ಮಾಡುವ ಕೆಲಸವನ್ನೇ ಮಠಗಳು ಮಾಡುತ್ತಿವೆ. ಹೀಗಾಗಿ ಪುಣ್ಯಶ್ರಮಕ್ಕೆ ಸರ್ಕಾರ ಅನಾದಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು ಬಳಿಯ ಕೆಲ ಧಾರ್ಮಿಕ ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ ಧವಸ ಧಾನ್ಯ ನೀಡುತ್ತಿದೆ. ಅದೇ ರೀತಿ ಸರ್ಕಾರ ಉತ್ತರ ಕರ್ನಾಟಕದ ಆಶ್ರಮಕ್ಕೂ ಕೊಡುಗೆ ನೀಡಬೇಕು. ಪುಣ್ಯಾಶ್ರಮದಕ್ಕೆ ಸಮಗ್ರ ಬೆಳವಣಿಗೆಗೆ ಸರ್ಕಾರ ಅನ್ನ, ಹಣ ನೀಡಬೇಕು ಎಂದು ಮನವಿ ಮಾಡಿ ದರು.



