Ad imageAd image

ರಾಜಕೀಯ ಶುದ್ಧೀಕರಣಕ್ಕಾಗಿ ದಿಂಗಾಲೇಶ್ವರ ಸ್ವಾಮೀಜಿ ರಾಜಕಾರಣಕ್ಕೆ :ವಚನಾನಂದ ಶ್ರೀ

Bharath Vaibhav
ರಾಜಕೀಯ ಶುದ್ಧೀಕರಣಕ್ಕಾಗಿ ದಿಂಗಾಲೇಶ್ವರ ಸ್ವಾಮೀಜಿ ರಾಜಕಾರಣಕ್ಕೆ :ವಚನಾನಂದ ಶ್ರೀ
WhatsApp Group Join Now
Telegram Group Join Now

ದಾವಣಗೆರೆ: ದಿಂಗಾಲೇಶ್ವರ ಸ್ವಾಮೀಜಿ ಅವರು ಪಕ್ಷೇತರವಾಗಿ ಸ್ಪರ್ಧಿಸುವುದನ್ನು ತಾವು ಸ್ವಾಗತಿಸುವುದಾಗಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಹೇಳಿದರು.

ವಚಾನಂದ ಶ್ರೀಗಳ ಬೆಂಬಲ ಕೋರಿ ಇಂದು ದಿಂಗಾಲೇಶ್ವರ ಶ್ರೀ ಭೇಟಿ ಈ ವೇಳೆ ಮಾತನಾಡಿದ ವಚನಾಂದ ಶ್ರೀಗಳು, ರಾಜಕೀಯ ಶುದ್ಧೀಕರಣಕ್ಕಾಗಿ ರಾಜಕಾರಣಕ್ಕೆ ಬಂದಿದ್ದಾರೆ.

ಅದು ಅವರ ವೈಯಕ್ತಿಕ ನಿರ್ಧಾರವಲ್ಲ, ಅವರ ಭಕ್ತರ ಅಭಿಪ್ರಾಯ ಕೇಳಿಕೊಂಡು ಚುನಾವಣೆ ಸ್ಪರ್ಧೆ ಮಾಡಿದ್ದಾರೆ. ಶ್ರೀಗೆ ಬೆಂಬಲ ನೀಡುವ ವಿಚಾರವಾಗಿ ಸದ್ಯದಲ್ಲೇ ಅಲ್ಲೊಂದು ಸಭೆ ಮಾಡಿ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದರು.

ಉತ್ತರ ಭಾರತದಂತೆ ಕರ್ನಾಟಕದಲ್ಲಿ ಮಠಾಧೀಶರು ರಾಜಕಾರಣಕ್ಕೆ ಬರಬೇಕು. ರಾಜಕಾರಣದಲ್ಲಿ ಅಶುದ್ಧಿಯನ್ನು ಶುದ್ಧಿ ಮಾಡಲಿಕ್ಕೆ ಪರಮ ಪೂಜ್ಯರು ಬಹಳ ಯೋಗ್ಯರು ಅಂತ ನನಗೆ ಅನಿಸುತ್ತದೆ.

‌ಪ್ರಹ್ಲಾದ ಜೋಶಿ ಅವರು ಆ ಭಾಗದ ಲಿಂಗಾಯತ ನಾಯಕರನ್ನು ತುಳಿಯುವಂತ ಕೆಲಸ ಮಾಡಿದ್ದಾರೆ ಎಂಬ ವಿಚಾರವೂ ನಮ್ಮ ಗಮನಕ್ಕೆ ಬಂದಿದೆ ಎಂದು ಕಿಡಿಕಾರಿದರು.

ಇದೇ ವೇಳೆ ದಿಂಗಾಲೇಶ್ವರ ಶ್ರೀ ಮಾತನಾಡಿ, ಜೋಶಿಯವರು ಕೆಲ ಮಠಾಧೀಶರನ್ನು ಹೆದರಿಸಿ ಬೆದರಿಸಿ ನನ್ನ ವಿರುದ್ಧ ಹೇಳಿಕೆ ಕೊಡಿಸುತ್ತಿದ್ದಾರೆ, ಅವರ ಕುಮ್ಮಕ್ಕಿನಿಂದ ಕೆಲ ಮಠಾಧೀಶರು ನನ್ನ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಇದು ನಿಲ್ಲದೇ ಹೋದರೆ ಅದರ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ.

ಸಮಾಜ ರಾಜಕೀಯ ಹೊರತುಪಡಿಸಿ ಇಲ್ಲ, ಸಮಾಜ ಸೇವೆಗೆ ಅವಕಾಶ ಸಿಕ್ಕಿದೆ, ಅದನ್ನು ಭಕ್ತರು ವಹಿಸಿದ್ದಾರೆ, ನಾವು ನಿಭಾಯಿಸುತ್ತೇವೆ ಅಷ್ಟೇ. ಲಿಂಗಾಯತ ನಾಯಕರನ್ನು ತುಳಿಯುವ ಕೆಲಸ ಜೋಶಿ ಮಾಡಿದ್ದಾರೆ ಎಂದು ಕಿಡಿಕಾರಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!