Ad imageAd image

ಭಕ್ತರ ಕಣ್ಮನ ಸೆಳೆದ ಕಾರ್ತಿಕ ಮಾಸದ ದೀಪೋತ್ಸವ

Bharath Vaibhav
ಭಕ್ತರ ಕಣ್ಮನ ಸೆಳೆದ ಕಾರ್ತಿಕ ಮಾಸದ ದೀಪೋತ್ಸವ
WhatsApp Group Join Now
Telegram Group Join Now

ಬೇಡಿಕೆ ಹಾಳ ಸಿದ್ದೇಶ್ವರ ಮಂದಿರದಲ್ಲಿ ಕಾರ್ತಿಕ ಮಾಸ ಪ್ರಯುಕ್ತ ಕಲ್ಯಾಣ ಸಿದ್ದೇಶ್ವರ ಯೂಥ್ ಫೌಂಡೇಶನ್ ವತಿಯಿಂದ 7111 ದೀಪಾಲಂಕಾರ

—————ಶಿವಲಿಂಗ ಪುಷ್ಪಾರ್ಚನೆ!! ರಂಗೋಲಿಯಲ್ಲಿ ಅರಳಿದ ನಂದಿ ಹಾಗೂ ಮಹಾಲಕ್ಷ್ಮಿ

ನಿಪ್ಪಾಣಿ:  ಐದು ಸಾಲಿನಲ್ಲಿ ತಿರುಗುವ ಬಣ್ಣದ ದೀಪಗಳು, ಕಲ್ಯಾಣ ಮಂಟಪದಲ್ಲಿ ರಂಗೋಲಿಯಲ್ಲಿ ಅರಳಿದ ದೀಪೋತ್ಸವ 2025, ಮುಖ್ಯ ದ್ವಾರದಲ್ಲಿ ಮಹಾಲಕ್ಷ್ಮಿ ,ಕೃಷ್ಣ ರಾಧೆ, ನಂದಿ ಎದುರು ಶಿವಲಿಂಗ,ಹಾಗೂ ಸಭಾಭವನದಲ್ಲಿ ಬ್ರಹದಾಕಾರದ ಲಿಂಗವನ್ನು ಇಪ್ಪತ್ತು ಕೆಜಿ ವಿವಿಧ ಪುಷ್ಪಗಳಿಂದ ಶೃಂಗಾರ ಈ ಎಲ್ಲ ದೃಶ್ಯಗಳು ಭಕ್ತರನ್ನು ಆಕರ್ಷಿಸಿದ್ದು ಸಿದ್ದೇಶ್ವರ ಮಂದಿರದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ 3ನೇ ರವಿವಾರ ನಡೆದ ದೀಪೋತ್ಸವದಲ್ಲಿ!! ಎಲ್ಲಿ ? ಏನು ಕಥೆ? ಎಂದು ಹುಬ್ಬೇರಿಸಬೇಡಿ ನಾವು ತೋರಿಸ್ತಿವಿ ನೋಡಿ!! ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಕಲ್ಯಾಣ ಸಿದ್ದೇಶ್ವರ ಮಂದಿರದಲ್ಲಿ ಕಲ್ಯಾಣ ಸಿದ್ದೇಶ್ವರ ಯೂಥ್ ಫೌಂಡೇಶನ್ ವತಿಯಿಂದ ನಡೆದ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಕಾರ್ಯಕ್ರಮ ಭಕ್ತರನ್ನು ಆಕರ್ಷಿಸಿತು.

ಸಂಪೂರ್ಣ ಮಂದಿರದಲ್ಲಿ 7111 ಹಣತೆಗಳನ್ನು ಇಟ್ಟು ದೀಪ ಹಚ್ಚಲಾಯಿತು. ಹಾಗಾದರೆ ಬನ್ನಿ ಪ್ರತ್ಯಕ್ಷ ದೃಶ್ಯಗಳನ್ನು ನಾವು ತೋರಿಸುತ್ತೇವೆ. ನೋಡಿ ಕಣ್ತುಂಬಿಕೊಳ್ಳಿ. ವಿಡಿಯೋ. ಇದೇ ಸಂದರ್ಭದಲ್ಲಿ ಕಲ್ಯಾಣ ಸಿದ್ದೇಶ್ವರ ಯೂಥ್ ಫೌಂಡೇಶನ್ ಅಧ್ಯಕ್ಷರು ಮಾತನಾಡಿ *ಕಳೆದ ಏಳು ವರ್ಷಗಳಿಂದ ದೀಪೋತ್ಸವ ಆಚರಿಸಲಾಗುತ್ತಿದೆ.

ಸನ್ 2018=19 ರಲ್ಲಿ 1111ದೀಪಗಳು,.2020ರಲ್ಲಿ 2111 ದೀಪಗಳು 2021 ರಲ್ಲಿ 3111 2022 ರಲ್ಲಿ 4111 2023 ರಲ್ಲಿ 5111 2024ರಲ್ಲಿ 6111 ಹಾಗೂ ಪ್ರಸಕ್ತ ವರ್ಷ 2025ರಲ್ಲಿ 7111 ದ್ವೀಪಗಳಿಂದ ಅಲಂಕಾರ ಮಾಡಲಾಗಿದೆ ಎಂದರು, ದೀಪೋತ್ಸವ ಯಶಸ್ವಿಗೊಳಿಸಲು ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಕಾರ್ಯಕಾರಿ ಸದಸ್ಯರು ವಿಶೇಷ ಶ್ರಮ ವಹಿಸಿದರು. ಇದೇ ವೇಳೆ ಅದ್ದೂರಿಯಾಗಿ ಸಿದ್ದೇಶ್ವರ ದೇವರ ಪಲ್ಲಕ್ಕಿ ಉತ್ಸವ ನಡೆಯಿತು.

ವರದಿ: ಮಹಾವೀರ ಚಿಂಚಣೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!