ಸೇಡಂ: ಈ ಮೂಲಕ ಸೇಡಂ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತಿ ಶಾಲೆಯ ಮುಖ್ಯಗುರುಗಳಿಗೆ ಮತ್ತು ಸಹ ಶಿಕ್ಷಕರಿಗೆ ಹಾಗೂ ತಾಲೂಕಿನ ಸಮಸ್ತ ಮೇಲುಸ್ತೂವಾರಿ ಅಧಿಕಾರಿಗಳಿಗೆ ಈ ಮೂಲಕ ಸೂಚಿಸುವುದೇನೆಂದರೆ, ಸೆನ್ಸಸ್-2027ರ ಸ್ವಯಂ ಗಣತಿ ಅಭಿಯಾನವು ದೇಶದ ಪ್ರಮುಖ ಜನಗಣತಿ ಕಾರ್ಯಕ್ರಮದ ಭಾಗವಾಗಿದೆ. ಪ್ರತಿಯೊಬ್ಬ ನಾಗರಿಕನೂ ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಕಡ್ಡಾಯ ಮತ್ತು ಸಾಮಾಜಿಕ ಹೊಣೆಗಾರಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ, ನಿಮ್ಮ ವ್ಯಾಪ್ತಿಯಲ್ಲಿ ಪ್ರತಿಯೊಬ್ಬ ಸಿಬ್ಬಂದಿ ಕನಿಷ್ಠ 15 ಕುಟುಂಬಗಳ ಸ್ವಯಂ ಗಣತಿಯನ್ನು ಪೂರ್ಣಗೊಳಿಸಲೇಬೇಕು. ಇದು ನಿಮ್ಮ ಕಾರ್ಯಕ್ಷಮತೆಯ ಮೌಲ್ಯಮಾಪನದ ಭಾಗವಾಗಿದ್ದು, ಯಾವುದೇ ಕಾರಣಕ್ಕೂ ವಿನಾಯಿತಿ ಇರುವುದಿಲ್ಲ.
ಕಾರ್ಯವಿಧಾನ:
1. ನಿಮ್ಮ ಸ್ವಂತ ಕುಟುಂಬದ ಗಣತಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಿ.
2. ನಿಮ್ಮ ನೆರೆಹೊರೆ, ಸಂಬಂಧಿಕರು, ಅಥವಾ ಶಾಲಾ ಸಂಪರ್ಕದ ಮೂಲಕ 15 ಕುಟುಂಬಗಳನ್ನು ಗುರುತಿಸಿ.
3. ಸೆನ್ಸಸ್ ಅಧಿಕೃತ ಪೋರ್ಟಲ್ / ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರತಿ ಕುಟುಂಬದ ಮಾಹಿತಿಯನ್ನು ನಿಖರವಾಗಿ ನಮೂದಿಸಿ.
4. ಪೂರ್ಣಗೊಳಿಸಿದ ಬಳಿಕ ಅದರ ಸ್ಕ್ರೀನ್ಶಾಟ್ ಅಥವಾ ಸ್ವೀಕೃತಿಯನ್ನು ಸಂಬಂಧಪಟ್ಟ ಸಿ.ಆರ್.ಪಿ ರವರಿಗೆ ಸಲ್ಲಿಸಿ.
ಗಮನಿಸಿ : ಈ ನಿಯಮವನ್ನು ಉಲ್ಲಂಘಿಸಿದ ಅಥವಾ ನಿರ್ಲಕ್ಷಿಸಿದ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಎಲ್ಲಾ ಶಾಲಾ ಮುಖ್ಯಸ್ಥರು ತಮ್ಮ ತಂಡದ ಪ್ರಗತಿಯನ್ನು ಪ್ರತಿದಿನ ಪರಿಶೀಲಿಸಿ, ವರದಿಯನ್ನು ಕಚೇರಿಗೆ ಸಲ್ಲಿಸಬೇಕು.
ಸೆನ್ಸಸ್-2027 ನಮ್ಮೆಲ್ಲರ ಸಹಭಾಗಿತ್ವವನ್ನು ಅಪೇಕ್ಷಿಸುತ್ತದೆ.ತಡವಾಗದೆ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿ ಮತ್ತು ಇತರರಿಗೂ ಮಾರ್ಗದರ್ಶನ ನೀಡಿ ಎಂದು ಸೇಡಂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾರುತಿ ಹುಜರಾತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




