ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಬಿಎಸ್‌ಎಸ್ ಮೈಕ್ರೋಫೈನಾನ್ಸ್ ಲಿಮಿಟೆಡ್ ಆಶ್ರಯದಲ್ಲಿ 2024ನೇ ಸಾಲಿನ 10ನೇ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.60ರಷ್ಟು ಉತ್ತೀರ್ಣರಾದ ಬಡ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಗುರುವಾರ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹೊಸಪೇಟೆ ಚಿತ್ತವಾಡಿಗಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಟಿ.ಎಸ್.ನಾಯ್ಕ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಈ ಮೈಕ್ರೋ ಫೈನಾನ್ಸ್ ವತಿಯಿಂದ ಜಿಲ್ಲೆಯಾದ್ಯಂತ 250 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ನೀಡಿರುವುದು ಶ್ಲಾಘನೀಯ ಎಂದರು.
ಬಳಿಕ ಮಾತನಾಡಿದ ಮೈಕ್ರೋ ಫೈನಾನ್ಸ್ ನಾರ್ತ್ ಸ್ಟೇಟ್ ಮುಖ್ಯಸ್ಥರು ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕೊಡುವ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಅದೇ ರೀತಿ ಬೇರೆ ರಾಜ್ಯಗಳ ವಿದ್ಯಾರ್ಥಿಗಳಿಗೂ ನೀಡುತ್ತಿದ್ದೇವೆ ಎಂದರು.
ವಿದ್ಯಾರ್ಥಿಗಳು ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.
ನಂತರ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ಬಾಲಕೃಷ್ಣ ವಿ, ಭಟ್, ಸಿ, ಮೈಕ್ರೋ ಫೈನಾನ್ಸ್ ಎಸ್ ಆರ್ ಹೆಡ್ ಪಂಡಿತ್ ಗಂಗಾಧರ ಪಾಟೀಲ್, ವಿಭಾಗ ವ್ಯವಸ್ಥಾಪಕ ದೇವರಾಜ್, ವಲಯ ವ್ಯವಸ್ಥಾಪಕ ಸುರೇಶ್, ಕ್ವಾಲಿಟಿ ಮ್ಯಾನೇಜರ್ ಸೂರ್ಯಕುಮಾರ್, ಕೃಷ್ಣಮೂರ್ತಿ, ರಮೇಶ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.




