ಗೋಕಾಕ : ತ್ಯಾಗ ಬಲಿದಾನ ಪ್ರತೀಕವಾದ ದಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದದಿಂದ ಆಚರಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು’ ಎಂದು ಗೋಕಾಕ ಶಹರ ಪಿಎಸ್ಐ ಕೆ,ವಾಲಿಕರ ಹೇಳಿದರು.
ಗೋಕಾಕ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ಯ ಏರ್ಪಡಿಸಿದ್ದ ಶಾಂತಿ ಸಭೆ ಉದ್ಧೇಶಿಸಿ ಮಾತನಾಡಿದ ಅವರು ಗೋಕಾಕದಲ್ಲಿ ಇಲ್ಲಿಯವರೆಗೆ ಯಾವುದೆ ಹಬ್ಬ ಇರಲಿ ಹಿಂದೂ ಮುಸ್ಲಿಂ ಅನ್ನದೆ ಎಲ್ಲರೂ ಸೌಹಾರ್ದತೆಯಿಂದ ಆಚರಿಸುತ್ತಾ ಬಂದಿರುವುದು ಸಾಮರಸ್ಯಕ್ಕೆ ಹೆಸರಾಗಿದೆ.
ಅಂಥ ಹೆಸರಿಗೆ ಚ್ಯುತಿಯಾಗದಂತೆ ಇರಬೇಕು. ಈಗಿನ ಯುವಕರಿಗೆ ಹಿರಿಯರಾದ ತಾವುಗಳು ಯಾವುದೆ ಧರ್ಮ, ವ್ಯಕ್ತಿಗೆ ದ್ವೇಷ ಸಾರುವ ಸಂದೇಶವನ್ನು ಹಾಕದಂತೆ ತಿಳಿಸಿಬೇಕು,ಒಂದು ವೇಳೆ ಕಾನೂನು ಪಾಲನೆ ಮಾಡದಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುಗುವುದು ಎಂದರು.

ಸಿಪಿಐ ಸುರೇಶಬಾಬು ಮಾತನಾಡಿ ಗೋಕಾಕದಲ್ಲಿ ಹಿಂದೂ ಮುಸ್ಲಿಂರು ಸೇರಿ ಪ್ರತಿ ಹಬ್ಬ ಆಚರುಸುವಂತೆ ಹತ್ತು ವರ್ಷದ ನಂತರ ಆಚರಿಸುವ ಗೋಕಾಕ ಗ್ರಾಮದೇವತೆ ಜಾತ್ರೆಯನ್ನು ಕೂಡ ಎಲ್ಲರೂ ಸೇರಿ ಭಕ್ತಿಯಿಂದ ಮಾಡೋಣ ಎಂದರು. ಶಾಂತಿ ಸಭೆಯಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಜಾವೇದ ಗೋಕಾಕ, ಸಾದೀಕ ಹಲ್ಯಾಳ, ನಗರಸಭೆ ಸದಸ್ಯ ಅಬ್ಬಾಸ ದೇಸಾಯಿ ಸಮಾಜದ ಪರವಾಗಿ ಕಾನೂನು ಪಾಲಿಸುತ್ತ ಬಕ್ರೀದ ಹಬ್ಬ ಆಚರಿಸುತ್ತೇವೆಂದು ಮಾತನಾಡಿದರು.
ಸಭೆಯಲ್ಲಿ ಮುಸ್ಲಿಂ ಸಮಾಜದ ಮುಖಂಡರು, ಗೋಕಾಕ ಜಾತ್ರಾ ಕಮಿಟಿಯ ಅದ್ಯಕ್ಷರು,ಪೋಲಿಸ್ ಸಿಬ್ಬಂದಿಗಳು ,ವಿವಿಧ ಸಂಘಟನೆಗಳ ಮುಖಂಡರು ಸ್ಥಳಿಯ ಜಾತ್ರಾ ಪ್ರಮುಖರು ಭಾಗವಹಿಸಿದ್ದರು.
ವರದಿ:ಮನೋಹರ ಮೇಗೇರಿ




