Ad imageAd image

ನಂದೂರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಾಜಕೀಯ ಸದಸ್ಯರ ಅಸಮಾಧಾನ

Bharath Vaibhav
ನಂದೂರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಾಜಕೀಯ ಸದಸ್ಯರ ಅಸಮಾಧಾನ
WhatsApp Group Join Now
Telegram Group Join Now

ಚಿಂಚೋಳಿ:ನಂದೂರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಾಜಕೀಯ ಸದಸ್ಯರ ಅಸಮಾಧಾನ. ನಂದೂರ ( ಬಿ ) ಗ್ರಾಮದ ಕೃಷಿ ಪತ್ತಿನ ವ್ಯವಸಾಯ ಸಹಕಾರ ಸಂಘಕ್ಕೆ ದಿನಾಂಕ 10 ರಂದು ಶುಕ್ರವಾರ ನಡೆದ ಅಧ್ಯಕ್ಷಯ ಚುನಾವಣೆಯಲ್ಲಿ ಅಕ್ಬರ್ ಹುಸೇನಿ ವಿನಾಕಾರಣ ರಾಜಕೀಯ ಎಳೆದು ತರುತ್ತಿರುವದು ಸರಿಯಲ್ಲ ಎಂದು ನೂತನ ಅಧ್ಯಕ್ಷ ಶಿವಯೋಗಪ್ಪ ನಾಟಿಕಾರ್ ಅಸಮಾಧಾನ ವ್ಯಕ್ತಪಡಿಸಿದರು. ಕಲಬುರಗಿಯಲ್ಲಿ ಧ್ವನಿ ಸಂಘದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನಮ್ಮ ನಂದೂರ್ ಬಿ ಗ್ರಾಮದ ಕೃಷಿ ಪತ್ತಿನ ಸ್ವಸಾಹಯ ಸಹಕಾರ ಸಂಘದ ಅನೇಕ ಚುನಾವಣೆಯಲ್ಲಿ ಇಲ್ಲಿಯವರೆಗೆ ಯಾವುದೇ ರಾಜಕೀಯ ಹಸ್ತ ಕ್ಷೇಪ ವಿಲ್ಲದೆ ಎಲ್ಲ ಸದಸ್ಯರ ಸಹಕಾರದಿಂದ ಒಮ್ಮತದಿಂದ ಚುನಾವಣೆ ನಡೆಸಿ ನಾವು ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದೇವೆ ಆದರೆ ಕಳೆದ ಶುಕ್ರವಾರ ದಿನಾಂಕ 10 ರಂದು ನಡೆದ ಚುನಾವಣೆಯಲ್ಲಿ ನನ್ನನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿದ್ದೂ ಇದನ್ನೂ ಸಹಿಸದ ಅಕ್ಬರ್ ಹುಸೇನಿ ಎಂಬವವರು ವಿನಾ ಕಾರಣ ಹಸ್ತಕ್ಷೇಪ ಮಾಡಿ ರಾಜಕೀಯ ತಳಕು ಹಾಕುತ್ತಿರುವದು ಸರಿಯಲ್ಲ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರನ್ನು ಇಲ್ಲಿ ಎಳೆದು ತಂದು ಗೊಂದಲ ಸೃಷ್ಟಿ ಮಾಡಿ ರಾಜಕೀಯ ಮಾಡುತ್ತಿರುವದು ಸರಿಯಲ್ಲ ಕೂಡಲೇ ಅಧಿಕಾರಕ್ಕಾಗಿ ಕಾಂಗ್ರೇಸ್ ಪಕ್ಷ ವ್ಯವಹಾರಕ್ಕಾಗಿ ಬಿಜೆಪಿ ಪಕ್ಷ ಎನ್ನುವ ಅಕ್ಬರ್ ಹುಸೇನಿ ಬಿಜೆಪಿ ಪಕ್ಷದ ಶಾಸಕ ಮತ್ತಿಮುಡ್ ಅವರ ಎಲ್ಲ ಚುನಾವಣೆಯ ಕಾರ್ಯ ಅವರ ಮನೆಯಲ್ಲಿಯೇ ನಡೆಯುತ್ತವೆ ಎಂದರು. ಅಕ್ಬರ್ ಹುಸೇನಿ ಕೋಲಿ ಸಮಾಜದ ಒಬ್ಬ ಹಿಂದುಳಿದ ವ್ಯಕ್ತಿ ಬೆಳೆಯುವದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಕೂಡಲೇ ಇಂತಹ ಸಣ್ಣ ಮನಸ್ಥಿತಿ ಹೊಂದುವದು ಅಕ್ಬರ್ ಹುಸೇನಿಗೆ ಒಳ್ಳೆಯದಲ್ಲ ಎಂದು ಕಿವಿಮಾತು ಹೇಳಿದರು. ನನ್ನನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿದ ಎಲ್ಲರಿಗೂ ಚಿರಋಣಿಯಾಗಿದ್ದು ಮುಂಬರುವ ದಿನಗಳಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸುವೆ ಎಂದರು. ಈ ಸಂದರ್ಭದಲ್ಲಿ ಪ್ರಾಥಮಿಕ್ ಕೃಷಿ ಪತ್ತಿನ ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದರು.

ವರದಿ:ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!