Ad imageAd image

ಡಾ.ಬಸವಲಿಂಗ ಅವದೂತರಿಂದ ಪ್ರವಚನ

Bharath Vaibhav
ಡಾ.ಬಸವಲಿಂಗ ಅವದೂತರಿಂದ ಪ್ರವಚನ
WhatsApp Group Join Now
Telegram Group Join Now

ಹಸರಗುಂಡಗಿ ಗ್ರಾಮದಲ್ಲಿ 3ನೇ ವರ್ಷದ ಗಣೇಶ್ ಮಹೋತ್ಸವದ ಪ್ರಯುಕ್ತ ಕಾರ್ಯಕ್ರಮ

ಚಿಂಚೋಳಿ :ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ 3ನೇ ವರ್ಷದ ಗಣೇಶ್ ಮಹೋತ್ಸವದ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಹಿರಭಾದ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಮತ್ತು ಬಸವಕಲ್ಯಾಣ ಆಶ್ರಮದಲ್ಲಿ ಪರಮ ಪೂಜ್ಯ ಶ್ರೀ ಡಾ.ಬಸವಲಿಂಗ ಅವಧೂತರು, ಅವರು ವಹಿಸಿಕೊಂಡು ನಂತರ ಕಾರ್ಯಕ್ರಮ ಉದ್ದೇಶಿಸಿರಿಗಳು ಶ್ರೀಗಳು ಮಾತನಾಡಿ ಹಸರಗುಂಡಗಿ ಗ್ರಾಮದಲ್ಲಿ 3ನೇ ವರ್ಷದ ಗಣೇಶ್ ಮಹೋತ್ಸವದ ಕಾರ್ಯಕ್ರಮ ಬಹಳಷ್ಟು ಅದ್ದೂರಿಯಾಗಿ ಶ್ರೀ ರಾಮ್ ಸೇನೆ ಗಣೇಶ ಯುವಕ ಮಂಡಳಿಯವರು ಆಯೋಜಿಸಿದ್ದಾರೆ.

ಅದೇ ರೀತಿ ನಾವೆಲ್ಲರೂ ದೇವರಿಗೆ ಭಕ್ತಿಯಿಂದ ಪೂಜೆ ಪುನಸ್ಕಾರ ಮಾಡಿದರೆ ದೇವರು ನಮಗೆ ಖಂಡಿತ ಒಳಿತಾನೆ ಭಕ್ತಿಯಿಂದ ಮತ್ತು ನಿಷ್ಠೆಯಿಂದ ದೇವರನ್ನು ಮನಸ್ಸಿನಲ್ಲಿ 10 ಇಲ್ಲ 15 ನಿಮಿಷ ಪ್ರಾರ್ಥನೆಯನ್ನು ಮಾಡಿ ನೋಡಿ ಅವಗೆ ನಿಮ್ಮ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಸಿಗುತ್ತೆ ಮತ್ತು ನಿಮ್ಮ ಕುಟುಂಬಕ್ಕೂ ಕೂಡ ಒಳ್ಳೆದಾಗುತ್ತೆ ಈಗ ನನ್ನ ಮಕ್ಕಳಿಗೆ ಮೊಬೈಲ್ ಫೋನಿಂದ ದೂರ ಬಿಟ್ಟು ಮಕ್ಕಳಿಗೆ ಪುಸ್ತಕಗಳ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಒಳ್ಳೆಯ ಸಾಂಸ್ಕೃತಿಯನ್ನು ಎಲ್ಲ ಪಾಲಕರು ಮಕ್ಕಳಿಗೆ ನೀಡಬೇಕು.

ಒಬ್ಬ ಮನುಷ್ಯ ಸಾವಿರಾರು ಕೋಟಿಗೊಳಿಸಿದರು ಕೂಡ ಸಾಯೋ ಟೈಮಲ್ಲಿ ಏನು ತಗೊಂಡು ಹೋಗೋದಿಲ್ಲ ಹಾಗಾಗಿ ಇದ್ದಾಗ ದಾನ ಧರ್ಮವನ್ನು ನಾವೆಲ್ಲರೂ ಮಾಡಬೇಕು ಬಡತನ ಶ್ರೀಮಂತನಕ್ಕೆ ಯಾರಿಗೂ ಶಾಶ್ವತ ಅಲ್ಲ ನಾವು ಬಡೋರ್ ಎಂದು ಮನೆಯಲ್ಲಿ ಕುಳಿತುಕೊಂಡು ಬಡತನದಲ್ಲಿ ದೇವೇಂದ್ರ ನಮಗೆ ಯಾರು ಕೇಳುವುದಿಲ್ಲ ಹಾಗಾಗಿ ನಾವು ದುಡಿಮೆಯನ್ನು ಮಾಡಬೇಕು ವಿಶ್ವಗುರು ಬಸವಣ್ಣ ಹೇಳಿದಂತೆ ಕಾಯಕವೇ ಕೈಲಾಸ ಎಂದು ತಮಗೆ ಏನು ಕೆಲಸ ಬರುತ್ತೆ, ಆ ಕೆಲಸ ಶ್ರಮದಿಂದ ಕೆಲಸ ಮಾಡಿದರೆ ತಾವು ಕೂಡ ಶ್ರೀಮಂತ ಆಗಬಹುದು ಆದರೆ ನಾನು ಬಡವಿದ್ದಿನೆಂದು ಹಳ್ಳಿ ಕಟ್ಟೆ ಮೇಲೆ ಕುಳಿತುಕೊಂಡು ನಾನು ಬಡವಿದ್ದೇನೆ ಎಂದು ಹೇಳಿದರೆ ನೀನು ಬಡವನೇ ಇರುತ್ತೀಯ ಹಾಗಾಗಿ ಒಳ್ಳೆ ಶ್ರಮದಿಂದ ಕೆಲಸ ಮಾಡಬೇಕು ಮತ್ತು ಪ್ರತಿಯೊಂದು ಗ್ರಾಮದಲ್ಲಿ ಶಾಂತಿ ಇರಬೇಕಾದರೆ ಗ್ರಾಮದಲ್ಲಿ ಇರುವ ಹಿರಿಯರಿಗೆ ಗ್ರಾಮದ ಯುವಕರು ಗೌರವವನ್ನು ಕೊಟ್ಟು ಗ್ರಾಮದ ಎಲ್ಲಾ ಸಮಾಜದ ಬಾಂಧವರು ಒಗ್ಗಟ್ಟದಿಂದ ಅಣ್ಣತಮ್ಮದವರಂತೆ ಇರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಸರಗುಂಡಗಿ ಗ್ರಾಮದ ಮುಖಂಡರಾದ ರಾಜಶೇಖರ ನಿಪ್ಪಾಣಿ, ರಾಹುಲ್.ವಿ.ರಾಯರೆಡ್ಡಿ,ರಾಜು ನೀರ್ಣ, ವೀರೇಶ್ ಚಿಂಚೋಳಿಕರ್, ಅನಿಲ್ ಹೇಮರೆಡ್ಡಿ, ಆಕಾಶ್ ಹೀರಾಪುರ್,ಹನಮಂತ ಹತ್ತಿ,ಮುರಳಿಧರ್ ಪಾಟೀಲ,ಶ್ರೀಕಾಂತ ವಡ್ಡನಕೇರಿ,ರವಿ ಹಾಬ್ಬುಲ್, ಚನ್ನವೀರ್ ಪುರಾಣಿಕ, ಆಕಾಶ ಕುಡಮಾಬಲ್, ಗುಂಡಯ್ಯ ಮಡಪತಿ, ಸಚಿನ ಉಪ್ಪಿನ,ಕಿರಣ ವಡ್ಡನಕೇರಿ, ಮತ್ತು ಅನೇಕ ಹಸರಗುಂಡಗಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ: ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!