ಚಿಂಚೋಳಿ : ಕಲ್ಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನ ಶ್ರೀ ಕ್ಷೇತ್ರ ರೇವಗ್ಗಿ (ರಟಕಲ್) ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿರ್ಮತವಾಗಿ ಪುರಾಣ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮದಲ್ಲಿ ಜಹಿರಭಾದ ಮಲ್ಲಯ್ಯಗಿರಿ, ಹಾಗೂ ದೇಗಲಮಡಿ, ಆಶ್ರಮದಲ್ಲಿ ಪರಮ ಪೂಜ್ಯ ಶ್ರೀ ಡಾ. ಬಸವಲಿಂಗ ಅವಧೂತರು, ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿ ಮನುಷ್ಯಗೆ ಶಾಂತಿ ಸಿಗಬೇಕಾದರೆ ಮನುಷ್ಯ ನೂರು ರೂಪಾಯಿ ಗಳಿಸಿದರೆ ಅದರಲ್ಲಿ ಹತ್ತು ರೂಪಾಯಿ ದಹನ ಧರ್ಮವನ್ನು ಮಾಡಿದರೆ ಮಾತ್ರ ಮನುಷ್ಯನಿಗೆ ನೆಮ್ಮದಿ ಸುಖ ದೊರೆಯುತ್ತದೆ ಅದು ಇಂದಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಜೊತೆಗೆ ಸಂಸ್ಕಾರವೂ ಕೂಡ ಬಹಳ ಅಗತ್ಯವಾಗಿದ್ದು ಎಲ್ಲಾ ತಾಯಿ ತಂದರು ತಮ್ಮ ಮಕ್ಕಳಿಗೆ ಒಳ್ಳೆ ಸಂಸ್ಕೃತಿ ಉತ್ತಮ ಅಭ್ಯಾಸವನ್ನು ಒದಗಿಸಿ ಒಳ್ಳೆ ಪ್ರಜೆಗಳನ್ನು ಮಾಡಬೇಕೆಂದು ಶ್ರೀಗಳು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಆಡಳಿತ ಅಧಿಕಾರಿ ಪ್ರಭು ರೆಡ್ಡಿ ಸಹಾಯಕ ಆಯುಕ್ತರು ಸೇಡಂ,ದೇವಸ್ಥಾನದ ಕಾರ್ಯದರ್ಶಿ ಸದಾಶಿವ ವಗ್ಗೆ,ವೀರಣ್ಣ ಗಂಗಣಿ ರಟಕಲ,ಸಂಜೀವ ಕುಮಾರ್ ಪಾಟೀಲ ಚಿಂಚೋಳಿ,ಪುರಾಣಿಕರಾದ ಮಹಾಲಿಂಗಯ್ಯ ಶಾಸ್ತ್ರಿ ಪಡಗದಹಳ್ಳಿ,ಮಾದೇವಯ್ಯ ಎಂಪಳ್ಳಿ, ಶಿವಕುಮಾರ ಸ್ವಾಮಿ ಉಡುಮ್ನಳ್ಳಿ,ಅರ್ಚಕರಾದ ಓಂಕಾರ ಮಠಪತಿ ರೇವಗಿ,ಗುಂಡಪ್ಪ ಉಪ್ಪಾರ ಹುಳಗೇರಾ,ಜಯಂತ ಬೈರಪ್ ರಟಕಲ್, ಸೇರಿದಂತೆ ಸಾವಿರಾರು ಜನಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಸುನಿಲ್ ಸಲ್ಗರ್




