ಕಲಘಟಗಿ: ತಂದೆ ಸಾವಿನಿಂದ ಮನನೊಂದಿದ್ದ 15 ವರ್ಷದ ಬಾಲಕಿಯೊಬ್ನಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ಗುರುವಾರ ಸಂಜೆ ಜರುಗಿದೆ.
ಮೃತ ಬಾಲಕಿಯನ್ನು ಅಪೇಕ್ಷಾ ಮಂಜುನಾಥ್ ಟೊಂಗಳೆ ಎಂದು ಗುರುತಿಸಲಾಗಿದೆ. ಅಪೇಕ್ಷಾ ತಂದೆ ಮಂಜುನಾಥ ಟೊಂಗಳೆ ಎರಡು ವರ್ಷದ ಹಿಂದೆ ನಿಧನರಾಗಿದ್ದರು.
ತಂದೆಯ ನಿಧನರಾದ ದಿನಗಳಿಂದ ಅಪೇಕ್ಷಾ ಮಾನಸಿಕವಾಗಿ ನೊಂದಿದ್ದಳು. ಗುರುವಾರ ಸಂಜೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ ಎಂದು ಅಪೇಕ್ಷಾ ತಾಯಿ ಮೀನಾಕ್ಷಿ ಟೊಂಗಳೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.