Ad imageAd image

ತಿಮ್ಮಪನ ಭಕ್ತರಿಗೆ 20 ಕೋಟಿ ಕಲಬೆರಕೆ ತುಪ್ಪದ ಲಡ್ಡು ಹಂಚಿಕೆ

Bharath Vaibhav
ತಿಮ್ಮಪನ ಭಕ್ತರಿಗೆ 20 ಕೋಟಿ ಕಲಬೆರಕೆ ತುಪ್ಪದ ಲಡ್ಡು ಹಂಚಿಕೆ
WhatsApp Group Join Now
Telegram Group Join Now

ತಿರುಪತಿ: ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯದ ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಕೆ ಮಾಡಿರುವ ವಿವಾದದ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.ಐದು ವರ್ಷದಲ್ಲಿ ತಿರುಪತಿಯಲ್ಲಿ 20 ಕೋಟಿ ಕಲಬೆರಕೆ ಲಡ್ಡು ಹಂಚಿಕೆ ಮಾಡಲಾಗಿದೆ.

ಕಲಬೆರಕೆ ತುಪ್ಪ ಬಳಸಿದ ಲಡ್ಡು ವಿತರಣೆ ಬಗ್ಗೆ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. 2019 ರಿಂದ 2024ರ ಅವಧಿಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ 11 ಕೋಟಿ ಭಕ್ತರಿಗೆ 48.76 ಕೋಟಿ ಲಡ್ಡು ವಿತರಿಸಲಾಗಿದ್ದು, ಇದರಲ್ಲಿ 20 ಕೋಟಿ ಲಡ್ಡುಗಳಲ್ಲಿ ಕಲಬೆರಕೆ ತುಪ್ಪ ಬಳಕೆಯಾಗಿದೆ ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಮಾಹಿತಿ ನೀಡಿದ್ದಾರೆ.

ಐದು ವರ್ಷದಲ್ಲಿ ದೇವಾಲಯಕ್ಕೆ ದೈನಂದಿನ ಭಕ್ತರ ಭೇಟಿ, ತುಪ್ಪ ಖರೀದಿ, ಲಡ್ಡು ಉತ್ಪಾದನೆ, ಮಾರಾಟ ವಿಷಯಗಳನ್ನು ಗಣನೆಗೆ ತೆಗೆದುಕೊಂಡು ಹಾಕಿದ ಲೆಕ್ಕಾಚಾರದಲ್ಲಿ ನಕಲಿ ತುಪ್ಪದಿಂದ ತಯಾರಿಸಿದ ಲಡ್ಡುಗಳು ಎಷ್ಟು ಎನ್ನುವುದು ಪತ್ತೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!