Ad imageAd image

ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ.

Bharath Vaibhav
ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ.
WhatsApp Group Join Now
Telegram Group Join Now

ಪಾವಗಡ :  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ ಮತ್ತು ಗಾಂಧಿ ಸ್ಮೃತಿ ಹಾಗೂ ಮಧ್ಯಪಾನ ಮುಕ್ತರಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು.

ಕಾರ್ಯಕ್ರಮವನ್ನು ರೈತ ಸಂಘದ ಅಧ್ಯಕ್ಷರಾದ ನರಸಿಂಹ ರೆಡ್ಡಿ ಉದ್ಘಾಟನೆ ಮಾಡಿದರು ಯೋಜನೆ ಕಾರ್ಯಕ್ರಮಗಳು ಕುರಿತು ಉಪಯುಕ್ತ ಮಾಹಿತಿ ನೀಡಿದರು.

 

ಈ ಕಾರ್ಯಕ್ರಮ ಪ್ರಾಸ್ತಾವಿಕ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕುನ ಯೋಜನಾಧಿಕಾರಿಗಳಾದ ಶ್ರೀ ಮಹೇಶ್ ತಾಲ್ಲೂಕುನಾ ವ್ಯಾಪ್ತಿಯಲ್ಲಿ ನಮ್ಮೂರು ನಮ್ಮ ಕೆರೆ . ಜ್ಞಾನ ದೀಪ ಶಿಕ್ಷಕರ ನೀಡುವುದು ಜ್ಞಾನ ವಿಕಾಸ ಕಾರ್ಯಕ್ರಮಗಳು.ನಗದರಲ್ಲಿ ಶುದ್ಧಗಂಗಾ ಘಟಕ ಸ್ಥಾಪನೆ.. ಸದಸ್ಯರಿಗೆ ಆರೋಗ್ಯ ರಕ್ಷಾ ವಿಮಾ ಸೌಲಭ್ಯ ಹಾಗೂ ಶಾಲೆಗಳಿಗೆ ಡೆಸ್ಕ್ ಬೆಂಚ್ ವಾಟರ್ ಫಿಲ್ಟರ್ ವಿತರಣೆ ಹಾಲು ಉತ್ಪಾದಕ ಕಟ್ಟಡಗಳಿಗೆ ಮತ್ತು ದೇವಸ್ಥಾನ ಕಟ್ಟಡ ಗಳಿಗೆ ಅನುದಾನ ವಿತರಣೆ ಇನ್ನು ಹಲವಾರು ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು ಸದ್ರಿ ಕಾರ್ಯಕ್ರಮದಲ್ಲಿ ಒಟ್ಟು 395 ಜನ ವಿದ್ಯಾರ್ಥಿಗಳಿಗೆ 2,40,000/ರೂ ಪ್ರತೀ ತಿಂಗಳು ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾಗಿದ್ದು ಮಂಜೂರಾತಿ ಪತ್ರ ವಿತರಿಸಿದ್ದರು

ಈ ಸಭೆಯಲ್ಲಿ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ . ಶ್ರೀ ಅಶ್ವಥ್ ಕುಮಾರ್ SSK ಸಂಘದ ಹಾಲಿ ನಿರ್ದೇಶಕರು ಹಾಗೂ ರಾಜಗೋಪಾಲ್ .ಲೋಕೇಶ್ ರತ್ನಮ್ಮ ಮತ್ತು ನವ ಜೀವನ ಸಮಿತಿ ಸದಸ್ಯರು ವಲಯದ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಸ್ವಸಹಾಯ ಸಂಘದ ಸದಸ್ಯರು ಮತ್ತು ಸೌಲಭ್ಯ ಪಡೆದುಕೊಳ್ಳುವ ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು.

ವರದಿ : ಶಿವಾನಂದ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!