ಹೊಸಪೇಟೆ: (ವಿಜಯನಗರ ಜಿಲ್ಲೆ ) ಜಿಲ್ಲೆಯಾದ್ಯಂತ ಶಾಲೆಗಳು ಈಗಾಗಲೇ ಪ್ರಾರಂಭವಾಗಿದ್ದು, ರಾಜ್ಯ ಸರ್ಕಾರವು ಶಾಲೆಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸುವತ್ತ ಗಮನಹರಿಸಿದೆ.

ಸೋಮವಾರ, ಆಯಾ ಶಾಲೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ನಗರದ ಜಿಲ್ಲಾ ಶಿಕ್ಷಣ ಇಲಾಖೆ ಪಕ್ಕದಲ್ಲಿರುವ ಪಿವಿಬಿಎಸ್ ಸರ್ಕಾರ ಶಾಲೆಯಲ್ಲಿ ಈ ಸಿ ಓ ರಾದ ರಾಜು ಅವರು ಆಯಾ ಶಾಲಾ ಮುಖ್ಯೋಪಾಧ್ಯಾಯರಿಗೆ ಪುಸ್ತಕ ಗಳನ್ನು ವಿತರಿಸಲಾಯಿತು. ಇಂಡೆಂಟ್ ಪ್ರಕಾರ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಶೇಕಡಾ 92 ಕ್ಕೂ ಹೆಚ್ಚು ಪುಸ್ತಕಗಳನ್ನು ಈಗಾಗಲೇ ಶಾಲೆಗಳಿಗೆ ವಿತರಿಸಲಾಗಿದೆ ಎಂದು ಅವರು ತಿಳಿಸಿದರು




