ಸೇಡಂ: ಚೇತನ್ ಅಹಿಂಸಾ ಗೆಳೆಯರ ಬಳಗ ಸೇಡಂ ವತಿಯಿಂದ ಮುಧೋಳ ಗ್ರಾಮದ ಬುಡಕಟ್ಟು ಅಲೇಮಾರಿ ಬುಡಗ ಜಂಗಾಮ 50 ಬಡ ಕುಟುಂಬದವರಿಗೆ ಮೈ ಕೋರೆಯುವ ಚಳಿಯಿಂದ ಸುರಕ್ಷಿತವಾಗಿರಲು ಬೆಚ್ಚನೆಯ ಹೊದಿಕೆ ಚಾದರ್ ಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಯುವ ವಕೀಲರಾದ ಗೋಪಾಲ ಎಲ್ ನಾಟೇಕಾರ ಮಾತನಾಡಿ ಸಾಮಾಜಿಕ ಹೋರಾಟಗಾರರು ಚಲನಚಿತ್ರ ನಟ ಬಡವರ ಬಂಧು ಯುವ ನಾಯಕ ಚೇತನ್ ಅಹಿಂಸಾ ಸರ್ ರವರು ಬಡ ಕುಟುಂಬಗಳಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದರೆ ಬಡವರ ಪರ ನ್ಯಾಯದ ಪರ ಹೋರಾಟ ಮಾಡುತ್ತಿದ್ದರೆ ಈ ಬಡ ಕುಟುಂಬಗಳಿಗೆ ಸಹಾಯ ಮಾಡಿ ಮಾನವಿಯತೆ ತೋರಿದ್ದರೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ನರೇಶ್ ನಾಟೇಕಾರ್ ಕೈಲಾಸ ಮೌರ್ಯ ಭೀಮು ಮುಧೋಳ, ವೆಂಕಟೇಶ್ ಅಶೋಕ, ನರೇಶ್ ನಾಟೇಕಾರ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ ವೆಂಕಟಪ್ಪ ಕೆ ಸುಗ್ಗಾಲ್