ಹುಮನಾಬಾದ: ತಾಲೂಕಿನ ನಂದಗಾಂವ ಗ್ರಾಮದಲ್ಲಿ ಭಾರತ ಜನ ಸೇವಾ ಟ್ರಸ್ಟ್ ವತಿಯಿಂದ ಸಮಾಜ ಸೇವಕ ಸೈಯದ್ ತಾಹೇರ್ ಅಲಿ ಅವರು ರಂಜಾನ ಹಬ್ಬದ ನಿಮಿತ್ತ ಬಡ ಜನರಿಗೆ ಆಹಾರ ಕಿಟ್ ವಿತರಣೆ ಮಾಡಿದರು.
5KG ಅಕ್ಕಿ 1KG ಸಕ್ಕರೆ ಅರ್ಧ KG ಬೆಳೆ,ಕಾಜು ಬಾದಾಮ್ ಶೇವಂಗಿ ಜೊತೆಗೆ ಒಂದು ಸೀರೆ ನಗದು ಹಣ ನೀಡಿ ಬಡವರ ಪಾಲಿನ ಪ್ರೀತಿಗೆ ಪಾತ್ರರಾಗಿದ್ದಾರೆ.
ನಂದಗಾಂವ,ಹುಡುಗಿ,ಹಳ್ಳಿಖೆಡ್ ಬಿ,ದುಬಲಗುಂಡಿ ಗ್ರಾಮ ಸೇರಿ ಸುಮಾರು 200ಕ್ಕೂ ಹೆಚ್ಚು ಬಡ ಕುಟುಂಬ ಗಳಿಗೆ ಈದ್ ಕಿಟ್ ವಿತರಣೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಿಟ್ ವಿತರಣೆ ಮಾಡಿ ಮಾತನಾಡಿದ ಸೈಯದ್ ತಾಹೇರ್ ಅಲಿ,ಸಮಾಜ ಸೇವೆಯ ಉದ್ದೇಶದಿಂದ ಟ್ರಸ್ಟ್ ಆರಂಭಿಸಿದ್ದು ವಿವಿಧ ಕ್ಷೇತ್ರದಲ್ಲಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ ನನಗೆ ನನ್ನ ಕುಟುಂಬದ ಸಂಪೂರ್ಣ ಬೆಂಬಲ ಇದೆ ಜೊತೆಗೆ ನಮ್ಮ ನಾಯಕರಾದ ಮಾಜಿ ಸಚಿವ ರಾಜಶೇಖರ ಪಾಟೀಲ್,ವಿಧಾನ ಪರಿಷತ್ ಸದಸ್ಯರಾದ ಭೀಮರಾವ ಪಾಟೀಲರ ಸಹಕಾರ ಬೆಂಬಲ ನಮಗಿದೆ ಎಂದರು.
ಈ ಸಂಧರ್ಭದಲ್ಲಿ ಸುಲ್ತಾನಾ ಬೇಗಂ ತಾಹೇರ್ ಅಲಿ, ಸೈಯದ್ ಅಲ್ತಾಫ್ ಅಲಿ,ಸೈಯದ್ ಅಹ್ಮದ್ ಅಲಿ, ಗ್ರಾಮಸ್ಥರಾದ ನಯಿಮುದ್ದಿನ್ ಮೌಲಾನ,ಮಸೀದಿ ಅಧ್ಯಕ್ಷ ಖಮ್ರೋದ್ದಿನ್ ಖಿಲ್ಜಿ, ಸೈಯದ್ ಅಜಿಜ್,ಸೈಯದ್ ಇದ್ರಿಸ್ ಸೇರಿ ಅನೇಕರು ಇದ್ದರು.
ವರದಿ:ಸಜೀಶ ಲಂಬುನೋರ