ಸೇಡಂ : ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಗರ ಪಂಚಮಿ ಹಬ್ಬದ ಪ್ರಯುಕ್ತ ಸೇಡಂ ಪಟ್ಟಣದ ಅನಾಥಾಶ್ರಮದ ಮಕ್ಕಳಿಗೆ ಹಾಲು ಹಣ್ಣು ಹಾಗೂ ನೋಟು ಪುಸ್ತಕಗಳು ವಿತರಣೆ ಮಾಡಿದರು ಈ ಕಾರ್ಯಕ್ರಮಕ್ಕೆ ಪಿಎಸ್ಐ ಉಪೇಂದ್ರ ಕುಮಾರ್ ಅವರು ಆಗಮಿಸಿದರು ಕಾರ್ಯಕ್ರಮದ ನೇತೃತ್ವ ಡಾಕ್ಟರ್ ರಾಮಚಂದ್ರ ಗುತ್ತೇದಾರ್ ವಹಿಸಿದರು.
ಕಾರ್ಯಕ್ರಮದಲ್ಲಿ ಮಹೇಶ್ ಪಾಟೀಲ್, ದೇವಕುಮಾರ್ ನಾಟಿಕರ್, ಗುಂಡಪ್ಪ ಪೂಜಾರಿ, ಕಿರಣ್ ಕುಮಾರ್ ಪಾಟೀಲ್, ಚಂದ್ರಶೇಖರ್ ಮಡಿವಾಳ, ಪವನ್ ಕುಲಕರ್ಣಿ, ರಘುವೀರ್, ವೀರಭದ್ರಯ್ಯ ಸ್ವಾಮಿ ಮತ್ತು ಅನಾಥಾಶ್ರಮದ ಆಡಳಿತ ಮಂಡಳಿ ಉಪಸ್ಥಿತರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




