ಅಥಣಿ :ತಾಲೂಕಿನ ನಂದಗಾಂವ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿನಿ ತನಿಷ್ಕಾ ಶಿವಾನಂದ ಪೂಜಾರಿ ಇವಳ ಹುಟ್ಟುಹಬ್ಬದ ಶಾಲಾ ವಿದ್ಯಾರ್ಥಿಗಳೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ವಿದ್ಯಾರ್ಥಿನಿಯ ಪಾಲಕರಾದ ಶಿವಾನಂದ ಸದಾಶಿವ ಪೂಜಾರಿ ಹಾಗೂ ತಾಯಿ ಪ್ರೀತಿ ಶಿವಾನಂದ ಪೂಜಾರಿ ಯವರು ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಹಾಗೂ 5 ನೇಯ ತರಗತಿಯ ಸುಮಾರು 49 ವಿದ್ಯಾರ್ಥಿಗಳಿಗೆ ನೋಟಪುಸ್ತಕ ಹಾಗೂ ಲೇಖನಿಗಳನ್ನು ನೀಡುವ ಮೂಲಕ ಅರ್ಥಪೂರ್ಣವಾಗಿ ತಮ್ಮ ಮಗಳ ಹುಟ್ಟು ಹಬ್ಬವನ್ನು ಆಚರಿಸಿ ಸರಕಾರಿ ಶಾಲೆಯ ಬಗ್ಗೆ ಕಾಳಜಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ನಮ್ಮ ಶಾಲೆಯ ಪರವಾಗಿ ಹಾಗೂ ಸರ್ವ ಶಿಕ್ಷಕ ವೃಂದದ ಪರವಾಗಿ ಪಾಲಕರಿಗೂ ಹಾಗೂ ಮುದ್ದು ವಿದ್ಯಾರ್ಥಿಗಳಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಪೋಷಕರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಎ ಎಮ್ ಡಾಂಗೆ ಗುರುಗಳು ಹಾಗೂ ಹಿರಿಯ ಶಿಕ್ಷಕರಾದ ಪಿ ಎಸ್ ಸಿಂಗ್ಯಗೋಳ ಎಸ್ ಜಿ ಹಿರೇಮಠ ಮತ್ತು ಡಿ ಆಯ್ ನವರತ್ನ ವಿ ಎನ್ ಪಾಟೀಲ ಬಿ ಎಸ್ ತೆಲಸಂಗ ಎಸ್ ಡಿ ರೋಖಡಿ ಹಾಗೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.
ವರದಿ: ಸುಕುಮಾರ ಮಾದರ




