ಸೇಡಂ: ತಾಲೂಕಿನ ಇಟ್ಕಲ್ ಗ್ರಾಮದ ಸರಕಾರಿ ಪ್ರೌಡ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಆಸರೆ ಮಿಷನ್ ೫೦+ ಆರು ವಿಷಯಗಳ ಪ್ರಶ್ನೆ ಹಾಗೂ ಉತ್ತರಗಳ ಪುಸ್ತಗಳನ್ನು ಲಿಂಗೈಕ್ಯ ಶಿವಾನಂದ ರೆಡ್ಡಿ ಗಡೇಕರ್ ಇವರ ನಾಲ್ಕನೇ ಪುಣ್ಯ ಸ್ಮರಣೆ ನಿಮಿತ್ಯ ಹತ್ತನೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಇವರ ತಮ್ಮನಾದ ನರಸರೆಡ್ಡಿ ಗಡೇಕರ್ ಇಟ್ಕಲ್ ಇವರಿಂದ ೬೨ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರ ಪುಸ್ತಕ ನೀಡಿ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಸಮಾಜ ಸೇವಕರಾದ ಮಹಾಂತೇಶ ಸಾಹುಕಾರ್ ಶಕಲಾಸಪಲ್ಲಿ, ಶಾಲೆಯ ಮುಖ್ಯ ಗುರುಗಳಾದ ಸತೀಶ್ ಢಗೆ, ಹಿರಿಯ ಶಿಕ್ಷಕರಾದ ಬನ್ನಪ್ಪ ಪಸರ್, ಮೊಹಮ್ಮದ್ ಸಾದಿಕ್ ಮಿಯಾ, ಝಾಕೀರ್ ಹುಸೇನ್, ಎಂಕ್ಯಾ ನಾಯಕ ರಾಥೋಡ್, ರವಿಕುಮಾರ್, ಬಶೀರ್ ಅಹ್ಮದ್ ಸೇರಿದಂತೆ ಸಿಬ್ಬಂದಿವರ್ಗ ಹಾಗೂ ಶಾಲಾ ಮಕ್ಕಳು ಭಾಗಿಯಾಗಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




