ಸಿರುಗುಪ್ಪ : -ನಗರದ ಸಿ.ಡಿ.ಪಿ.ಓ ಕಛೇರಿಯಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇನ್ನಿತರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಅಂಗನವಾಡಿ ಕೇಂದ್ರಗಳಿಗೆ ರೆಫ್ರಿಜರೇಟರ್, ಕಾರ್ಯಕರ್ತೆಯರಿಗೆ ಸ್ಮಾರ್ಟ್ ಪೋನ್, ತೂಕದ ಯಂತ್ರ, ಸಮವಸ್ತ್ರ ಇನ್ನಿತರ ಪರಿಕರಗಳ ವಿತರಣೆ ಕಾರ್ಯಕ್ರಮವನ್ನು ಶಾಸಕ ಬಿ.ಎಮ್.ನಾಗರಾಜ ಅವರು ಉದ್ಘಾಟಿಸಿದರು.
ಅಗತ್ಯವಿರುವ ಸೌಲಭ್ಯಗಳಿಗಾಗಿ ಸರ್ಕಾರದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿ ವಿಶೇಷ ಅನುದಾನದಡಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೊದಲನೆಯದಾಗಿ ಸಂಡೂರಿನಲ್ಲಿ ಕೊಡಲಾಗಿತ್ತು.
ಅಂಗನವಾಡಿ ಕೇಂದ್ರಗಳಲ್ಲಿ ತರಕಾರಿಗಳು, ಮೊಟ್ಟೆಗಳ ಸಂಗ್ರಹಣೆಗಾಗಿ ಅನುಕೂಲವಾಗುವ ನಿಟ್ಟಿನಲ್ಲಿ ರೆಫ್ರಿಜರೇಟರ್ ನೀಡಲಾಗಿದ್ದು, ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿಯರು ಮತ್ತು ಸಹಾಯಕಿಯರು ಮಕ್ಕಳಿಗೆ ಸದ್ಬಳಕೆಯಾಗುವಂತೆ ಉಪಯೋಗಿಸಬೇಕೆಂದರು.
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಸ್ಮಾರ್ಟ್ ಪೋನ್ ವಿತರಣೆ ಮಾಡಲಾಯಿತು. ತಾಲೂಕಿನಲ್ಲಿ ಉತ್ತಮ ಸಾಧನೆಗೈದ ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ ಸನ್ಮಾನಿಸಲಾಯಿತು.
ಇದೇ ವೇಳೆ ಗ್ರೇಡ್-2 ತಹಶೀಲ್ದಾರ್ ಸತ್ಯಮ್ಮ, ಉಪ ನಿರ್ದೇಶಕ ವಿಜಯ್‌ಕುಮಾರ್.ಕೆ.ಹೆಚ್, ಜಿಲ್ಲಾ ನಿರೂಪಣಾಧಿಕಾರಿ ರಾಮಕೃಷ್ಣ ನಾಯಕ, ಡಿ.ಸಿ.ಪಿ.ಓ ಎಳೆನಾಗಪ್ಪ, ಸಿ.ಡಿ.ಪಿ.ಓ ಪ್ರದೀಪ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಿಟ್ಟೂರು ಕರಿಬಸಪ್ಪ, ನಗರಸಭೆ ಸದಸ್ಯ ಹೆಚ್.ಗಣೇಶ ಮುಖಂಡರಾದ ಶಂಕ್ರಪ್ಪ, ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕಿಯರು, ಸಿಬ್ಬಂದಿಗಳು, ಇದ್ದರು.
ವರದಿ :-ಶ್ರೀನಿವಾಸ ನಾಯ್ಕ