Ad imageAd image

19 ಲಕ್ಷಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್, ಮುಟ್ಟಿನ ಕಪ್ ವಿತರಣೆ

Bharath Vaibhav
19 ಲಕ್ಷಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್, ಮುಟ್ಟಿನ ಕಪ್ ವಿತರಣೆ
WhatsApp Group Join Now
Telegram Group Join Now

ಬೆಂಗಳೂರು: ‘ಶುಚಿತ್ವದ ನಡಿಗೆ – ಹೆಣ್ಣುಮಕ್ಕಳ ಆತ್ಮವಿಶ್ವಾಸದ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ರಾಜ್ಯ ಸರ್ಕಾರವು ಹೆಣ್ಣುಮಕ್ಕಳ ಸಬಲೀಕರಣಕ್ಕೆ ಬದ್ಧವಾಗಿದ್ದು, ರಾಜ್ಯದ ಹದಿಹರೆಯದ ಹೆಣ್ಣುಮಕ್ಕಳ ಋತುಚಕ್ರದ ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ 71.83 ಕೋಟಿ ರೂ ಅನುದಾನ ಬಿಡುಗಡೆ ಮಾಡುವ ಮೂಲಕ ‘ಶುಚಿ’ ಯೋಜನೆಗೆ ಮರುಚಾಲನೆ ನೀಡಿದೆ.

ನಾಡಿನ ಸುಮಾರು 19 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈ ಯೋಜನೆಯ ಫಲಾನುಭವಿಗಳು. ‘ಶುಚಿ’ ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ 2,35,74,084 ಸ್ಯಾನಿಟರಿ ಪ್ಯಾಡ್ ಯುನಿಟ್‌ಗಳ ವಿತರಣೆ ಮಾಡಲಾಗುತ್ತಿದೆ. 10,38,912 ಸುಸ್ಥಿರ ‘ಮುಟ್ಟಿನ ಕಪ್'(Menstrual Cups) ವಿತರಿಸಲಾಗುತ್ತಿದೆ.

ಸರ್ಕಾರಿ ಹಾಗೂ ಅನುದಾನಿತ ಶಾಲೆ, ಕಾಲೇಜು ಮತ್ತು ಹಾಸ್ಟೆಲ್‌ಗಳ ಎಲ್ಲಾ ನೋಂದಾಯಿತ ವಿದ್ಯಾರ್ಥಿನಿಯರಿಗೆ ಇದರ ಸೌಲಭ್ಯ ತಲುಪುತ್ತದೆ. 6 ರಿಂದ 8ನೇ ತರಗತಿ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಹಾಗೂ 9ನೇ ತರಗತಿಯಿಂದ ಪಿಯುಸಿ ವಿದ್ಯಾರ್ಥಿನಿಯರಿಗೆ ಪ್ಯಾಡ್‌ಗಳ ಜೊತೆಗೆ ಪರಿಸರ ಸ್ನೇಹಿ ಮುಟ್ಟಿನ ಕಪ್ ನೀಡಲಾಗುತ್ತಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!