ಚಿಟಗುಪ್ಪ: ತಾಲ್ಲೂಕಿನ ಇಟಗಾ ಗ್ರಾಮದ ಶಿವಸಿದ್ಧ ಯೋಗಾಶ್ರಮ ಶಾಖಾ ಮುಕ್ತಿಮಠದ ಪೀಠಾಧಿಪತಿಗಳಾದ ಧರ್ಮಶ್ರೀ ತಪೋರತ್ನ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯರು,ಹಾಗೂ ಹಿರೇಮುನವಳ್ಳಿಯ ಶ್ರೀ ಶಂಭುಲಿಂಗ ಶಿವಾಚಾರ್ಯರ ಇವರ ದಿವ್ಯ ನೇತೃತ್ವದಲ್ಲಿ ಜರುಗಿದ ಲಿಂಗೈಕ್ಯ ಪೂಜ್ಯ ದಾಸೋಹ ಮೂರ್ತಿ ಶ್ರೀ ಚನ್ನಮಲ್ಲೇಶ್ವರ ತ್ಯಾಗಿಗಳವರ ದ್ವಿತೀಯ ಪುಣ್ಯಾರಾಧನೆ ಸಮಾರಂಭದಲ್ಲಿ ಸಸಿ ವಿತರಣೆ ಮಾಡಲಾಯಿತು.
ಬಳಿಕ ಪರಿಸರವಾಡಿ ಶೈಲೆಂದ್ರ ಕಾವಡಿ ಮಾತನಾಡಿ,ಲಿಂಗೈಕ್ಯ ಪೂಜ್ಯ ಶ್ರೀ ಚನ್ನಮಲ್ಲೇಶ್ವರ ಹುಟ್ಟುಹಬ್ಬವನ್ನು ಹಸಿರು ಹಬ್ಬವನ್ನಾಗಿ ಆಚರಿಸಬೇಕು ಎಂಬ ಆಶಯ ಹೊಂದಿದ್ದರು.ಅವರ ಆಶೆಯದಂತೆ ಪ್ರತಿವರ್ಷ ಸಸಿ ವಿತರಿಸುವ ಮೂಲಕ ಚನ್ನಮಲ್ಲೇಶ್ವರ ಹುಟ್ಟುಹಬ್ಬ ಮತ್ತು ಪುಣ್ಯ ಸ್ಮರಣೆಯನ್ನು ಹಸಿರು ಹಬ್ಬವೆಂದು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯರು,ಶಂಭುಲಿಂಗ ಶಿವಾಚಾರ್ಯರು ಉಪಸ್ಥಿತರಿದ್ದರು.
ಸಜೀಶ ಲಂಬುನೋರ:




