ನಿಪ್ಪಾಣಿ: -ಚಿಕ್ಕೋಡಿ ತಾಲೂಕಿನ ಧರ್ಮನಗರಿ ಶಮನೇವಾಡಿಯಲ್ಲಿ ರಾ-ಸ್ಥಾನ್ ಮೂಲದ ಭಿವಾಡಿಯ ವರ್ಧಮಾನ ಪರಿವಾರ ಸೇವಾ ಸಂಸ್ಥೆಯ ವತಿಯಿಂದ ಜೈನ ಧರ್ಮದಲ್ಲಿಯ ಕೃಷಿಭೂಮಿ ರಹಿತ, ಕಡುಬಡ ಕುಟುಂಬಗಳಿಗೆ ಹೊಲಿಗೆ ಯಂತ್ರ, ದಿನಸಿಕಿಟ್ ವಿತರಿಸಲಾಯಿತು.
ಗುರುವಾರ ಬೆಳಿಗ್ಗೆ ಶಮನೆವಾಡಿ ಗ್ರಾಮದ ಕಲ್ಪದ್ರುಮ ಸಭಾಮಂಟಪದಲ್ಲಿ ನಡೆದ ಕಿಟ್ ವಿತರಣೆ ಸಮಾರಂಭದಲ್ಲಿ ವರ್ಧಮಾನ ಪರಿವಾರ ಅಧ್ಯಕ್ಷ ಅಶೋಕ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ದೆಹಲಿಯ ಸಂಜಯ ಜೈನ, ನಾಯವಾಡದ ರಾಕೇಶ್ ಜೈನ್ ಸಾಗರದ ಬಬಿತಾ ಜೈನ್ ಗುಲ್ಬರ್ಗಾದ ಮಹೇಶ ಜೈನ, ಹಾವೇರಿಯ ಸುಧರ್ಮ ಜೈನ, ಅವರ ಮುಖ್ಯ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೇಡಕಿಹಾಳ ಶಮನೇವಾಡಿ, ಸದಲಗಾ, ನವಲಿಹಾಳ್ ಗಳತಗಾ ಸೇರಿದಂತೆ ಸುತ್ತಲಿನ ಹಳ್ಳಿಗಳ ಮುನ್ನೂರಕ್ಕೂ ಅಧಿಕ ಕುಟುಂಬಗಳಿಗೆ ದಿನಸಿಕಿಟ್, ಹೊಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ಶಿಷ್ಯವೃತ್ತಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಶೋಕ್ ಜೈನ್ ಮಹೇಶ್ ಜೈನ್ ಹಾಗೂ ಸುದರ್ಶನ್ ಖೋತ, ಮಾತನಾಡಿ “ಕರ್ನಾಟಕ ಸರ್ಕಾರದಿಂದ ಅಲ್ಪಸಂಖ್ಯಾತ ಜೈನ್ ಸಮಾಜಕ್ಕೆ ಯಾವುದೇ ಸವಲತ್ತುಗಳು, ಸ್ಥಾನಮಾನಗಳು ಸಿಗುತ್ತಿಲ್ಲ. ಕರ್ನಾಟಕ ಅಭಿವೃದ್ಧಿ ನಿಗಮದಲ್ಲಿ ಇನ್ನೂವರೆಗೆ ಜೈನ್ ಸಮಾಜದವರಿಗೆ ಅಧ್ಯಕ್ಷ ಸ್ಥಾನ ದೊರೆತಿಲ್ಲ.ಅದೇ ರೀತಿ ಅಲ್ಪಸಂಖ್ಯಾತ ಆಯೋಗ ಸಮಿತಿ ಜೈನ್ ಸಮಾಜಕ್ಕೆ ಆದ್ಯತೆ ನೀಡಲ್ಲವೆಂದರು.
ಈ ಸಂದರ್ಭದಲ್ಲಿ ಸುದರ್ಶನ ಖೋತ, ತಾತ್ಯಾಸಾಹೇಬ ಖೋತ, ಬಾಪುಸಾಹೇಬ ಐನಾಪುರೇ, ಸುಭಾಷ್ ಮಗದುಮ್ ಕುಮಾರ ಕೋರುಚೆ, ಜಿತೇಶ್, ಭಾವಸಾಹೇಬ,ಆರ್.ಬಿ. ಖೋತ ಸೇರಿದಂತೆ ವೀರಸೇವಾ ದಳ,ವೀರ ಮಹಿಳಾ ಮಂಡಳ,ಕಾರ್ಯಕರ್ತರು ಸಮಸ್ತ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.ಸುದರ್ಶನ ಖೋತ ಸ್ವಾಗತ ಪ್ರಸ್ತಾವನೆ ಮಾಡಿದರು.ಆರ್.ಬಿ.ಖೋತ ವಂದಿಸಿದರು. ಮಹಾವೀರ ಚಿಂಚಣೆ. ಭಾರತ ವೈಭವ ನ್ಯೂಸ್ ಬೇಡಕಿಹಾಳ.
ವರದಿ:- ಮಹಾವೀರ ಚಿಂಚಣಿ