ಸಿಂಧನೂರು : ಜೂನ್ 22 ರವಿವಾರ ನಗರದ ಶ್ರೀ ಚೈತನ್ಯ ವಿವಿದೋದ್ಧೇಶ ಸಹಕಾರ ಸಂಘ ನಿಯಮಿತ ವತಿಯಿಂದ ಸಹಕಾರಿ ಸದಸ್ಯರಿಗೆ ಯಶಸ್ವಿನಿ ಕಾರ್ಡ್ ವಿತರಿಸಲಾಯಿತು ಎಂದು ಸಹಕಾರ ಸಂಘದ ಅಧ್ಯಕ್ಷ ಗೂರಪ್ಪ ಎಸ್. ಮುಕ್ಕುಂದ ತಿಳಿಸಿದರು
ನಂತರ ಅವರು ಮಾತನಾಡಿ ನಮ್ಮ ಶ್ರೀ ಚೈತನ್ಯ ವಿವಿಧೋದ್ದೇಶ ಸಹಕಾರ ಸಂಘವು 27 ಜುಲೈ 2014 ರಂದು ಪ್ರಾರಂಭಗೊಂಡಿದ್ದು ಮುಂದಿನ ತಿಂಗಳ 27 ಜುಲೈ 5 ವರ್ಷದ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದು ಜನರ ಮನಸ್ಸನ್ನು ಗೆದ್ದು ಒಳ್ಳೆಯ ಸೇವೆಯನ್ನು ನೀಡಿ 6ನೇ ವರ್ಷಕ್ಕೆ ಕಾಲಿಡುತ್ತಿದ್ದು ಈ ಶುಭ ಸಂದರ್ಭದಲ್ಲಿ ನಮ್ಮ ಸಹಕಾರ ಸಂಘವು 24 ಎಸ್ಸಿ /ಎಸ್ಟಿ ಸಹಕಾರ ಸಂಘದ ಸದಸ್ಯರುಗಳಿಗೆ ಉಚಿತವಾಗಿ ಯಶಸ್ವಿನಿ ಕಾರ್ಡ್ ವಿತರಿಸಲಾಯಿತು ಕರ್ನಾಟಕ ಸರ್ಕಾರ ಸಹಕಾರ ಇಲಾಖೆ ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ಟ್ರಸ್ಟ್ ವತಿಯಿಂದ ಯಶಸ್ವಿನಿ ಕಾರ್ಡ್ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಠ ಮಿತಿ ರೂ 5,00,000 (ಐದು ಲಕ್ಷದವರಿಗೆ) ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ ಈ ಯೋಜನೆಯಡಿ ವ್ಯಕ್ತಿಯ ನೆಟ್ ವರ್ಕ್ ಆಸ್ಪತ್ರೆಗೆ ನೇರವಾಗಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಇದರಿಂದ ಚಿಕಿತ್ಸೆ ಸುಲಭ ಸಾಧ್ಯವಾಗಲಿದೆ.
ಈ ಯೋಜನೆಯಡಿ ಮುಖ್ಯವಾಗಿ ಹೃದಯ ಸಂಬಂಧಿಸಿದೆ ರೋಗಗಳು. ಕಿವಿ, ಮೂಗು, ಗಂಟಲು ವ್ಯಾಧಿಗಳು. ಕರುಳಿನ ಖಾಯಿಲೆಗಳು. ನರಗಳಿಗೆ ಸಂಬಂಧಿಸಿದ ಖಾಯಿಲೆಗಳು. ಕಣ್ಣಿನ ಖಾಯಿಲೆಗಳು. ಮೂಳೆ ರೋಗಗಳು. ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆ ಇತ್ಯಾದಿ ರೋಗಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗಿದೆ, ಹಾಗೂ ಹಲವು ನಮ್ಮ ಸಹಕಾರ ಸಂಘದಿಂದ ಆಕರ್ಷಕ ಮತ್ತು ವೈಶಿಷ್ಟ್ಯಗಳನ್ನು ಸಾರ್ವಜನಿಕರಿಗೆ ಉಳಿತಾಯ ಖಾತೆ. ಚಾಲ್ತಿ ಖಾತೆ. ಮುದ್ದತ್ತು ಠೇವಣಿ. ಆವರ್ಥಕ ಠೇವಣಿ. ಪಿಗ್ಮಿ ಮತ್ತು ಇವುಗಳ ಜೊತೆಗೆ ಸಾಲ ಸೌಲಭ್ಯಗಳಾದ ವೈಯಕ್ತಿಕ ಸಾಲ. ವಾಹನ ಸಾಲ. ವ್ಯಾಪಾರಿ ಸಾಲ. ಆಭರಣ ಸಾಲ. ಠೇವಣಿ ಆಧಾರಿತ ಸಾಲ. ಸ್ವಉದ್ಯೋಗ ಸಾಲ. ಸಂಬಳ ಆಧಾರಿತ ಸಾಲ. ಸೇವೆಯನ್ನು ನೀಡುತ್ತಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದರು
ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾದ ಗೂರಪ್ಪ ಎಸ್. ಮುಕ್ಕುಂದ. ಗೌರವಾಧ್ಯಕ್ಷ ದುರುಗೇಶ್ ಬಾಲಿ. ಉಪಾಧ್ಯಕ್ಷ ಫಕೀರಪ್ಪ ಎನ್, ಸತ್ಯವತಿ ಕ್ಯಾಂಪ್. ನಿರ್ದೇಶಕರಾದ ಅಶೋಕ್ ಮ್ಯಾಗಳ ಮನಿ ಗೊರೆಬಾಳ. ರತ್ನಪ್ಪ ಮುಕ್ಕುಂದ. ಜಯಪ್ಪ ಜಿ. ಗೊರಬಾಳ. ಚನ್ನಬಸವ ಸಿದ್ದಾಂಪುರ. ಮುದಿಯಪ್ಪ ಮುಕ್ಕುಂದ. ಹಾಗೂ ವ್ಯವಸ್ಥಾಪಕ , ಗಂಗಾಧರ್ ಗೊರೆಬಾಳ. ಸಿಬ್ಬಂದಿ ಪ್ರವೀಣ್ ಇನ್ನಿತರ ಇದ್ದರು.
ಬಸವರಾಜ ಬುಕ್ಕನಹಟ್ಟಿ, ಸಿಂಧನೂರು




