————————–ಹೆಗ್ಗನಹಳ್ಳಿ ಶಾಲಾ ಮೈದಾನದಲ್ಲಿ ಬಿ.ಪ್ಯಾಕ್ ಸಂಸ್ಥೆಯಿಂದ ವಿತರಣೆ
ಬೆಂಗಳೂರು: ಬಯೋಕಾನ್ ಮುಖ್ಯಸ್ಥ ಕಿರಣ್ ಮಜಮ್ದಾರ್ ಷಾ ಅವರ ಬಿ.ಪ್ಯಾಕ್ ಸಂಸ್ಥೆ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ಸರ್ಕಾರಿ ಶಾಲಾ ಮೈದಾನದಲ್ಲಿ ಹೆಗ್ಗನಹಳ್ಳಿಯ ಕಾಂಗ್ರೆಸ್ ಯುವ ನಾಯಕ ಉಮೇಶ್ ಬೊರೆಗೌಡ ಅವರ ನೇತೃತ್ವದಲ್ಲಿ ಪೌರ ಕಾರ್ಮಿಕರಿಗೆ ಸ್ವಿಟ್ ಪೊಟ್ಟಣ ವಿತರಿಸಲಾಯಿತು.

ಇದೆ ವೇಳೆ ಮಾತನಾಡಿದ ಉಮೇಶ್ ಬೊರೆಗೌಡ ಅವರು ಮಳೆ ಚಳಿ ಬಿಸಿಲು ಲೆಕ್ಕಿಸದೆ ನಮ್ಮ ಪೌರ ಕಾರ್ಮಿಕರು ಬೆಳಗಿನ ಜಾವದಿಂದಲೆ ತಮ್ಮ ಕೆಲಸ ಶುರು ಮಾಡುತ್ತಾರೆ ಅವರಿಗೆ ನಾವುಗಳು ಎಷ್ಟು ಸಲಾಂ ಹೇಳಿದರು ಸಾಲದು ಎಂದು ಪೌರ ಕಾರ್ಮಿಕರ ಕಾರ್ಯ ಚಟುವಟಿಕೆಗಳ ಬಗ್ಗೆ ಉಮೇಶ್ ಬೊರೆಗೌಡ್ರು ಹಾಡಿ ಹೊಗಳಿದರು.
ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಕಾಂಗ್ರೆಸ್ ಪ್ರಭಲ ಆಕಾಂಕ್ಷಿ ಅಭ್ಯರ್ಥಿಗಳಾದ ಬಾ.ನಾ ರವಿ, ಸೋಮಶೇಖರ್ (ಸೋಮ ಏರ್ಟೇಲ್), ಕೆಪಿಸಿಸಿ ಕಾರ್ಮಿಕ ವಿಭಾಗದ ಜಂಟಿ ಕಾರ್ಯದರ್ಶಿ ನಿಸಾರ್ ಖಾನ್, ಹೆಗ್ಗನಹಳ್ಳಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಆರ್ ಸತೀಶ್ ಚಂದ್ರ, ವಾರ್ಡ ಮಾಜಿ ಅಧ್ಯಕ್ಷ ಬಸವರಾಜ್ ಸೇರಿದಂತೆ ಪಾಲಿಕೆ ಸಿಬ್ಬಂದಿ ವರ್ಗದವರು ಪೌರ ಕಾರ್ಮಿಕರು ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.
ಗ್ರೆಟರ್ ಬೆಂಗಳೂರು ಕಾಂಗ್ರೆಸ್ ಪ್ರಭಲ ಆಕಾಂಕ್ಷಿ ಅಭ್ಯರ್ಥಿಗಳಾದ ಬಾ.ನಾ ರವಿ, ಸೋಮಶೇಖರ್ (ಸೋಮ ಏರ್ಟೇಲ್), ಕೆಪಿಸಿಸಿ ಕಾರ್ಮಿಕ ವಿಭಾಗದ ಜಂಟಿ ಕಾರ್ಯದರ್ಶಿ ನಿಸಾರ್ ಖಾನ್, ಹಗ್ಗನಹಳ್ಳಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಆರ್ ಸತೀಶ್ ಚಂದ್ರ, ಹೆಗ್ಗನಹಳ್ಳಿ ವಾರ್ಡಿನ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸವರಾಜ್ ಸೇರಿದಂತೆ ಪಾಲಿಕೆ ಸಿಬ್ಬಂದಿ ವರ್ಗದವರು ಪೌರ ಕಾರ್ಮಿಕರು ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




