Ad imageAd image

ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ!

Bharath Vaibhav
ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ!
WhatsApp Group Join Now
Telegram Group Join Now

ಸಿಂಧನೂರು: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 19 ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ಶಾಸಕ ಹಂಪನಗೌಡ ಬಾದರ್ಲಿ ವಿತರಿಸಿದರು.


ನಂತರ ಮಾತನಾಡಿದ ಅವರು ಶಾಸಕರ ಅನುದಾನದಲ್ಲಿ ರಾಜ್ಯ ಸರ್ಕಾರ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಅಂಗವಿಕಲರ ಪಟ್ಟಿಯನ್ನು ಪಡೆದು20 ರಿಂದ 25 ರವರೆಗೆ ತ್ರಿಚಕ್ರ ವಾಹನಗಳು ಬಿಡುಗಡೆ ಮಾಡಿದ್ದು ನನ್ನು ಕ್ಷೇತ್ರದಲ್ಲಿ19 ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನ ಬಿಡುಗಡೆ ಮಾಡಿಸಿದ್ದು ಅಂಗವಿಕಲರು ಇದರ ಸತ್ಬಳಕೆಯನ್ನು ಮಾಡಿಕೊಳ್ಳಬೇಕಾಗಿದೆ ಬಡವರ ಕಲ್ಯಾಣಕ್ಕಾಗಿ ಒತ್ತು ನೀಡಿಡಲಾಗಿದ್ದು ಅಂಗವಿಕಲರಿಗೆ ಮತ್ತಷ್ಟು ಆತ್ಮಸ್ಥೈರ್ಯ ತುಂಬಬೇಕಾಗಿದೆ ಸಂಚಾರ ನಿಯಮಗಳ ಕುರಿತು ಹೆಚ್ಚಿನ ಅರಿವನ್ನು ಹೊಂದುವ ಮೂಲಕ ಸುರಕ್ಷಿತ ಹಾಗೂ ಜಾಗರೂಕತೆಯ ಚಾಲನೆಗೆ ಆದ್ಯತೆ ನೀಡಬೇಕು ವೇಗದ ಮಿತಿ ಕಡೆ ಹೆಚ್ಚಿನ ಗಮನ ಹರಿಸಬೇಕು.

ಈಗಾಗಲೇ ವೈದ್ಯಕೀಯ ಅರ್ಹತಾ ಪರೀಕ್ಷೆ ನಡೆಸಿ ಅವರಿಗೆ ಮಾತ್ರ ತ್ರಿಚಕ್ರ ವಾಹನ ನೀಡಲಾಗಿದೆ ಗ್ರಾಮೀಣ ಪ್ರದೇಶಗಳಿಂದ ತಾಲೂಕ ಕೇಂದ್ರಕ್ಕೆ ಆಗಮಿಸಲು ಹಾಗೂ ದೈನಂದಿನ ಚಟುವಟಿಕೆಗಳಿಗೆ ತ್ರಿಚಕ್ರ ವಾಹನ ಸಹಕಾರಿಯಾಗುವುದು ಎಂದರು.
ಈ ವೇಳೆ : ಪಂಪನಗೌಡ ಬಾದರ್ಲಿ. ಖಾಜ ಮಲ್ಲಿಕ್. ರಾಜುಗೌಡ. ವೈ. ಅರುಣ್ ಕುಮಾರ. ಹಾರುನ್ ಪಾಷಾ. ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

ವರದಿ: ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!