ಸಿರುಗುಪ್ಪ : ನಗರದ ಗ್ರಾಂಡ್ ವೈಷ್ಣವಿ ಹೋಟೆಲ್ನ ಸಭಾಂಗಣದಲ್ಲಿ ರಾರಾವಿ ಸಚಿನ್-11(ಲೆವೆನ್) ಕ್ರಿಕೆಟ್ ತಂಡದ ಆಟಗಾರರಿಗೆ ಬಿಜೆಪಿ ಪಕ್ಷದ ಮಾಜಿ ತಾಲೂಕಾಧ್ಯಕ್ಷ ಆರ್.ಸಿ.ಪಂಪನಗೌಡ ಅವರು ಜೆರ್ಸಿ ಪ್ಯಾಂಟ್ ಟೀಶರ್ಟ್ ಗಳ ಸಮವಸ್ತ್ರ ವಿತರಣೆ ನೀಡಿದರು.
ನಂತರ ಮಾತನಾಡಿ ತಂಡದ ಎಲ್ಲಾ ಆಟಗಾರರಿಗೆ ಜರ್ಸಿ ಟೀಶರ್ಟ್ ಪ್ಯಾಂಟ್ ವಿತರಣೆ ಮಾಡಲಾಗಿದ್ದು, ನಮ್ಮ ರಾರಾವಿಯ ಎಲ್ಲಾ ಜನಾಂಗದ ಯುವಕರು ಆಸಕ್ತಿಯಿಂದ ತಂಡವನ್ನು ಕಟ್ಟಿದ್ದಾರೆ.
ಕ್ರೀಡಾಸಕ್ತಿಯುಳ್ಳ ಯುವಕರಿಗೆ ಪ್ರೋತ್ಸಾಹ ಮುಖ್ಯವಾಗಿರುತ್ತದೆ.
ಈ ತಂಡವು ಜಿಲ್ಲಾ ಮತ್ತು ರಾಜ್ಯದಲ್ಲಿ ಉತ್ತಮ ಸಾಧನೆಯನ್ನು ಮಾಡಲೆಂದರು. ಅಲ್ಲದೇ ಮುಂದಿನ ದಿನಗಳಲ್ಲಿ ತಂಡಕ್ಕೆ ಬೇಕಾಗುವ ಇನ್ನಿತರ ಸಹಕಾರವನ್ನು ನೀಡಲಾಗುವುದೆಂದು ತಿಳಿಸಿದರು.
ತಂಡದ ಆಟಗಾರರಾದ ಚಂದ್ರು, ಶರಣ.ಪಿ, ವೀರೇಶ್, ಶರಣ, ಶಿವರಾಯ, ಬಸವರಾಜ, ಪ್ರಕಾಶ್, ಪಾಂಡು, ಯಶ್, ನಾಗ.ಕೆ.ಆರ್.ಟಿ, ರಾಮು ಅವರು ತಂಡಕ್ಕೆ ಸಮವಸ್ತ್ರ ನೀಡಿದ ಪಂಪನಗೌಡರಿಗೆ ದನ್ಯವಾದಗಳನ್ನು ತಿಳಿಸಿದರು.
ಇದೇ ವೇಳೆ ಮುಖಂಡರಾದ ಸುಳುವಾಯಿ ಮಲ್ಲಿಕಾರ್ಜುನ, ಚಂದ್ರಶೇಖರ, ಶಿವಪ್ಪ ಆಚಾರಿ, ಪೂಜಾರಿ ಹಗರೆಪ್ಪ, ರಾರಾವಿ ವಿ.ಎಸ್.ಎಸ್.ಎನ್. ಅಧ್ಯಕ್ಷ ಗರಡಿ ಚಿದಾನಂದ, ಉಪಾಧ್ಯಕ್ಷ ಗಂಗಾಧರ ಸೇರಿದಂತೆ ಇನ್ನಿತರರಿದ್ದರು.
ವರದಿ : ಶ್ರೀನಿವಾಸ ನಾಯ್ಕ.




