Ad imageAd image

ಜಿಲ್ಲಾ ಬಾಲ ಭವನ ಪ್ರಗತಿ ಪರಿಶೀಲನಾ ಸಭೆ

Bharath Vaibhav
ಜಿಲ್ಲಾ ಬಾಲ ಭವನ ಪ್ರಗತಿ ಪರಿಶೀಲನಾ ಸಭೆ
WhatsApp Group Join Now
Telegram Group Join Now

21 ದಿನಗಳೊಳಗೆ ಲೆಕ್ಕ ಪರಿಶೋಧನಾ ವರದಿಯನ್ನು ಸಲ್ಲಸಿ: ಜಿ.ಪಂ. ಸಿ.ಇ.ಓ.ರಾಹುಲ್ ಶಿಂಧೆ ಸೂಚನೆ

ಬೆಳಗಾವಿ: ಜಿಲ್ಲಾ ಬಾಲ ಭವನ ಖಾತೆಯ ಆಡಿಟನ್ನು ಜಿಲ್ಲಾ ಪಂಚಾಯತ ಸಹಾಯಕರ ಸಹಕಾರದೊಂದಿಗೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಖಾತೆಯನ್ನು ನಿರ್ವಹಿಸುವುದು ಹಾಗೂ 21 ದಿನಗಳೊಳಗೆ ಲೆಕ್ಕ ಪರಿಶೋಧನಾ ವರದಿಯನ್ನು ಸಲ್ಲಿಸಲು ಅಧಿಕಾರಿಗಳಿಗೆ ಬಾಲ ಭವನದ ಸಂಘದ ಅಧ್ಯಕ್ಷರು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಅವರು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ ಕಾರ್ಯಾಲಯದ ಸಭಾಂಗಣದಲ್ಲಿ ಸೋಮವಾರ  ಜರುಗಿದ ಬಾಲ ಭವನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶ್ರೀನಗರದ ಬಳಿಯ ಹಳೆಯ ಬಾಲಭವನದ ಭೂಮಿ ಮತ್ತು ನಿರ್ಮಾಣದ ಎಲ್ಲಾ ವಿವರಗಳನ್ನು ಮತ್ತು ಬಾಡಿಗೆಗೆ ನೀಡುವ ಸಲುವಾಗಿ ಇರುವ ಅವಕಾಶಗಳ ಪಟ್ಟಿ ಸಲ್ಲಿಸಲು ತಿಳಿಸಿದರು ಅಲ್ಲದೇ ಹಳೆಯ ಬಾಲ ಭವನದ ಖಾಲಿ ಇರುವ ಭೂಮಿಯನ್ನು ಬಳಸಿಕೊಂಡು ಬಾಕ್ಸ್ ಕ್ರಿಕೆಟ್ ಮೈದಾನವನ್ನು ನಿರ್ಮಿಸುವ ಮೂಲಕ ಆದಾಯ ಗಳಿಸುವುದಲ್ಲದೇ ಮಕ್ಕಳಿಗೆ ಅನುಕೂಲವಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

ಎನ್.ಸಿ.ಸಿ ಗ್ರೌಂಡ್ ಹತ್ತಿರ ನಿರ್ಮಾಣವಾಗುತ್ತಿರುವ ಹೊಸ ಬಾಲಭವನ ಕಟ್ಟಡ ಕಾಮಗಾರಿ ಪ್ರಗತಿಯ ಕುರಿತು ಮಾಹಿತಿ ಪಡೆದು ನಿಯಮಿತ ಕಾಲದಲ್ಲಿ ಕೆಲಸ ಪೂರ್ಣಗೊಳಿಸಲು ನಿರ್ಮಿತಿ ಕೇಂದ್ರದವರಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಬಾಲ ಭವನ ಕಾರ್ಯದರ್ಶಿಗಳು ಹಾಗೂ ಉಪ ನಿರ್ದೇಶಕರು ಮ.ಮ.ಅ.ಇ ಬೆಳಗಾವಿ ಆರ್. ನಾಗರಾಜ್ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಶೇಖರ ಹಾಜರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!