Ad imageAd image

ಹಾಸನದಲ್ಲಿ ಜಿಲ್ಲಾ ಆಸ್ಪತ್ರೆ ವೈದ್ಯರ ಎಡವಟ್ಟು : ಎಡಗಾಲು ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ 

Bharath Vaibhav
ಹಾಸನದಲ್ಲಿ ಜಿಲ್ಲಾ ಆಸ್ಪತ್ರೆ ವೈದ್ಯರ ಎಡವಟ್ಟು : ಎಡಗಾಲು ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ 
WhatsApp Group Join Now
Telegram Group Join Now

ಹಾಸನ : ಹಾಸನದಲ್ಲಿ ಜಿಲ್ಲಾ ಆಸ್ಪತ್ರೆ ವೈದ್ಯರ ಮಹಾ ಎಡವಟ್ಟು ಮಾಡಿದ್ದು, ಎಡಗಾಲು ಬದಲು ಬಲಗಾಲಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಬಲಗಾಲು ಕೊಯ್ದಿರುವ ಜಿಲ್ಲಾಸ್ಪತ್ರೆಯ ವೈದ್ಯ ಸಂತೋಷ, ಜ್ಯೋತಿ ಅನ್ನುವವರ ಬಲಗಾಲು ಕುಯ್ದಿದ್ದಾರೆ. ಅಪಘಾತ ಹಿನ್ನೆಲೆಯಲ್ಲಿ ಜ್ಯೋತಿ ಅವರ ಎಡಗಾಲಿಗೆ ರಾಡ್ ಅಳವಡಿಕೆ ಮಾಡಿದ್ದಾರೆ.

ಎರಡುವರೆ ವರ್ಷದ ಹಿಂದೆ ಎಡಗಾಲಿಗೆ ರಾಡ್ ಅಳವಡಿಕೆ ಮಾಡಿದ್ದರು ಮತ್ತೆ ಕಾಲು ನೋವು ಹಿನ್ನೆಲೆ ಆಸ್ಪತ್ರೆಗೆ ಜ್ಯೋತಿ ಬಂದಿದ್ದರು.

ಆದರೆ ಬಲಗಾಲಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು ಎಡಗಾಲನ್ನು ಕೊಯ್ದು ರಾಡು ಅಳವಡಿಸಿದ್ದರು. ಬಳಿಕ ತಮ್ಮ ತಪ್ಪಿನ ಅರಿವಾದ ನಂತರ ಎಡಗಾಲಿನ ರಾಡ್ ತೆಗೆದು ಮತ್ತೆ ಇದೀಗ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ವೈದ್ಯರ ಎಡವಟ್ಟಿಗೆ ಮಹಿಳೆ ಜ್ಯೋತಿ ಆಘಾತಕ್ಕೆ ಒಳಗಾಗಿದ್ದಾರೆ. ಚಿಕ್ಕಮಂಗಳೂರು ಜಿಲ್ಲೆಯ ಬೂಚನಹಳ್ಳಿಯ ಕಾವಲು ಗ್ರಾಮದ ನಿವಾಸಿಯಾಗಿದ್ದಾರೆ.

ಎರಡುವರೆ ವರ್ಷದ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದರು. ತೀವ್ರ ಪೇಟ್ಟಾಗಿದ್ದರಿಂದ ವೈದ್ಯರು ಎಡಗಾಲಿಗೆ ಅಳವಡಿಸಿದ್ದರು.ಇತ್ತೀಚಿಗೆ ಕಾಲಿಗೆ ಅಳವಡಿಸಿದ್ದ ರಾಡ್ ನಿಂದ ಜ್ಯೋತಿಗೆ ನೋವು ಕಾಣಿಸಿಕೊಂಡಿತ್ತು.

ಹಿಮ್ಸ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾಕ್ಟರ್ ಸಂತೋಷ್ ಬಳಿಗೆ ತೋರಿಸಿದರು. ಸೆಪ್ಟೆಂಬರ್ 20ರಂದು ಹಾಸನದ ಹಿಂಸೆ ಆಸ್ಪತ್ರೆಗೆ ಜ್ಯೋತಿ ದಾಖಲಾಗಿದ್ದರು.

ನಿನ್ನೆ ಜೊತಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದ ಸಂತೋಷ್ ಶಾಸ್ತ್ರ ಚಿಕಿತ್ಸೆಯ ವೇಳೆ ಎಡಗಾಲು ಬದಲು ಬಲಗಾಲು ಕುಯ್ದು ತಡವಟ್ಟು ಮಾಡಿದ್ದಾರೆ ಕಡೆಗೆ ತಮ್ಮ ತಪ್ಪಿನ ಅರಿವಾಗಿ ಎಡಗಾಲಿಗೆ ಅಳವಡಿಸಿದ್ದ ರಾಡ್ ಅನ್ನು ಇದೀಗ ಸಂತೋಷ್ ತೆಗೆದಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!