ಧಾರವಾಡ : ಮಾನ್ಯ ಕಾರ್ಮಿಕ ಸಚಿವರು ಕರ್ನಾಟಕ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಧಾರವಾಡ ಜಿಲ್ಲೆ ಧಾರವಾಡರವರ ಅಧ್ಯಕ್ಷತೆಯಲ್ಲಿ ದಿನಾಂಕ 01-04-2026 ರಂದು ಇತ್ತಿಚಿಗೆ ಸುರಿದ ಬೇಸಿಗೆಯ ಅಕಾಲಿಕ ಮಳೆಯಿಂದ ಹಾನಿ ಹಾಗೂ ಪರಿಹಾರ ಕುರಿತು ಹಾಗೂ ಬೇಸಿಗೆ ಅವಧಿಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಭೆ ಮಾಡಿದರು.
ಮಾನ್ಯ ಜಿಲ್ಲಾಧಿಕಾರಿ ಜಿಲ್ಲಾ ಧಾರವಾಡ, ಮಾನ್ಯ ಪೋಲಿಸ ಆಯುಕ್ತರು ಜಿಲ್ಲಾ ಧಾರವಾಡ ಹಾಗೂ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ ಧಾರವಾಡ ಮತ್ತು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಎಲ್ಲಾ ತಾಲ್ಲೂಕಿನ ಕಾಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯತ ಮತ್ತು ಎಲ್ಲಾ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ವಿನಾಯಕ ಗುಡ್ಡದಕೇರಿ




