ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅಶೋಕ ಪಟ್ಟಣ
ರಾಮದುರ್ಗ:ತಾಲೂಕಿನ ಸುರೇಬಾನ-ಮನಿಹಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ನೆಟ್ ಬಾಲ್ ಹಾಗೂ ಬ್ಯಾಡ್ಮಿಂಟನ್ ಪಂದ್ಯಾವಳಿಯು ಮಂಗಳವಾರ ಜರುಗಿದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಸಕ ಅಶೋಕ ಪಟ್ಟಣ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅಥಿಗಳಾಗಿ ಅವರಾದಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹಾದೇವಿ ಬಾಡಗಾರ, ಸುರೇಬಾನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಶ್ರುಫ್ ಬಂದಗಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಗಿರಿಯಪ್ಪ ಹನಸಿ, ಪ್ರಾಚಾರ್ಯರಾದ ನಾಗರಾಜ ಹಕ್ಕೇರ, ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಹಾಂತೇಶ ಮೋಟೆ, ರೂಪಾ ಯಲಗೋಡ, ಜಿ ಎಸ್ ಪಾಟೀಲ, ಶಿವಾನಂದ ಮೇಟಿ, ಶಿವಮೂರ್ತೆಪ್ಪ ಗುರುಬಸಣ್ಣವರ, ಮಂಜುನಾಥ ಪಾಟೀಲ,ಉಪನ್ಯಾಸಕರಾದ ರಮೇಶ ಮೋಟೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಕುಮಾರ ಎಂ




