ಸಂಕೇಶ್ವರದಲ್ಲಿ ಪವನ ಕಣಗಲಿ ಫೌಂಡೇಶನ್ ಆಯೋಜಕತ್ವದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ “ಪತಂಗೋತ್ಸವ-2026” ಆಯೋಜನೆಗೊಂಡಿದೆ.
ಉತ್ತರಾಯಣದ ಶ್ರೇಷ್ಟತೆಯನ್ನು ಎತ್ತಿ ಹಿಡಿದು ಗಾಳಿಪಟವೆಂದರೆ ಕೇವಲ ಮಕ್ಕಳಾಟವಲ್ಲ, ಅದು ನಮ್ಮ ಸಂಸ್ಕೃತಿಯ ಧ್ಯೋತಕ ಎಂದು ಸಾಬೀತುಪಡಿಸಿರುವ “ಪವನ ಕಣಗಲಿ ಫೌಂಡೇಶನ್” ವಿದ್ಯಾರ್ಥಿಗಳಿಗಾಗಿ ಗಾಳಿಪಟ ತಯಾರಿಸಿ, ಹಾರಿಸುವ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಭವಿಷ್ಯದ ಪೀಳಿಗೆಗೆ ಸಂಕ್ರಾಂತಿಯ ಸಾಂಸ್ಕೃತಿಕ ಹಿನ್ನೆಲೆಯನ್ನು ಮನದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ಇಟ್ಟ ಮಹತ್ವಾಕಾಂಕ್ಷೆಯ ಹೆಜ್ಜೆಗೆ ಈಗ ಸಾರ್ಥಕ ಏಳು ವರ್ಷದ ಸಂಭ್ರಮ!




