Ad imageAd image

ಕೋಳಿ ಬೆಸ್ತ ಸಮಾಜದ ವತಿಯಿಂದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ

Bharath Vaibhav
ಕೋಳಿ ಬೆಸ್ತ ಸಮಾಜದ ವತಿಯಿಂದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ
WhatsApp Group Join Now
Telegram Group Join Now

ಹುಕ್ಕೇರಿ :-ದಿಲೀಪ ಕುರಂದವಾಡೆ ಇವರ ನೇತೃತ್ವದಲ್ಲಿ ಎಸ್ ಎಸ್ ಕನ್ವೆನ್ಷನಲ್ ಹಾಲ್ ಸಂಕೇಶ್ವರ ರೋಡ್ ಹುಕ್ಕೇರಿಯಲ್ಲಿ ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜದ ವತಿಯಿಂದ ಜಿಲ್ಲಾಮಟ್ಟದ ಮಹಿಳಾ ಸಮಾವೇಶ ನಡೆಸಲಾಯಿತು.ನೂತನ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾದ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಇವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಪ್ರಿಯಾಂಕ ಜಾರಕಿಹೊಳಿ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕೋಳಿ ಬೆಸ್ತ ಸಮಾಜವನ್ನು ಎಸ್ ಟಿ ಮೀಸಲಾತಿಗೆ ಒಳಪಡಿಸುವಲ್ಲಿ ಶ್ರಮ ವಹಿಸುತ್ತೇನೆ ಎಂದು ಭರವಸೆಯ ಮಾತನ್ನು ಸಹ ಹೇಳಿದರು.

ಹಾಗೂ ನಮ್ಮ ತಂದೆಯಾದ ಸಚಿವ ಸತೀಶ್ ಜಾರಕಿಹೊಳಿ ಅವರು ಕೋಳಿ -ಬೆಸ್ತ ಸಮುದಾಯವನ್ನು ಎಸ್. ಟಿ. ಸಮುದಾಯಕ್ಕೆ ಸೇರಿಸಬೇಕೆಂಬ ಆಸೆ ಹೊಂದಿರುತ್ತಾರೆ ಅದರಂತೆ ನಾನು ಸಹ ನಿಮ್ಮ ಸಮುದಾಯದ ಪ್ರಗತಿಗೆ ಶ್ರಮಿಸುತ್ತೇನೆ ಚುನಾವಣೆ ಪ್ರಚಾರ ಸಮಯದಲ್ಲಿ ಮಹಿಳೆಯರು ಸಾಕಷ್ಟು ಮನವಿಯನ್ನು ಸಲ್ಲಿಸಿದಾರೆ ಉದ್ಯೋಗ ಸೃಷ್ಟಿಗೆ ಮೊದಲು ಆದ್ಯತೆ ನೀಡಲಾಗುವುದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕೆಂಬುದು ನನ್ನ ಆಶಯ ಎಂದರು.

ಹಾಗೂ ಹುಕ್ಕೇರಿ ತಾಲೂಕಿನ ಕೋಳಿ ಬೆಸ್ತ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಿನ ಕೋಳಿ ಬೆಸ್ತ ಸಮಾಜ ಸಂಘದ ತಾಲೂಕ ಅಧ್ಯಕ್ಷರಾದ ಶ್ರೀ ಕಿಶೋರ್ ಶಿರಗೆ ಕೋಳಿ ಬೆಸ್ತ ಸಮಾಜದ ಜಿಲ್ಲಾ ಸಂಘದ ಸದಸ್ಯರಾದ ಶ್ರೀ ಬಸವರಾಜ್ ಕುರಂದವಾಡೆ ಹಾಗೂ ಸಹ ಕಾರ್ಯದರ್ಶಿಯಾದ ಶ್ರೀ ಭರಮಣ್ಣಾ ಬಸಪ್ಪಾ ಅಮ್ಮೀನಭಾವಿ ಮತ್ತು ಸಮಾಜದ ಮುಖಂಡರಾದ ಶ್ರೀ ಜೀವನ್ ಕಿಶೋರ್ ಶಿರಗೆ, ಶ್ರೀ ಮಹಾದೇವ್ ಗೋಣಿ, ಶ್ರೀ ರಂಗನಾಥ್ ಭಾರಕೆರ್, ಶ್ರೀ ಶಿವರಾಜ್ ಕೋಳಿ ಇತ್ಯಾದಿ ಯವರು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ವರದಿ:-ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!