ರಾಯಚೂರಿನಲ್ಲಿ ಬೆಳ್ಳಂ ಬೆಳಿಗ್ಗೆ ಲೊಕಾಯುಕ್ತ ದಾಳಿ..
ನಗರದ ದೇವರ ಕಾಲೋನಿಯಲ್ಲಿನ ಮನೆ ಮೇಲೆ ದಾಳಿ..
ನರಸಿಂಗರಾವ್ ಗುಜ್ಜಾರ್ ಎಂಬ ಅಧಿಕಾರಿ ಮನೆ ಮೇಲಾ ದಾಳಿ..
ಬೆಳಿಗ್ಗೆ 6 ಗಂಟೆಗೆ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು..
ಮನೆಯಲ್ಲಿ ಶೋಧಕಾರ್ಯ ನಡೆಸಿರುವ ಅಧಿಕಾರಿಗಳು..
ರಾಯಚೂರ : ಅಕ್ರಮ ಆಸ್ತಿ ಆರೋಪದ ಮೇಲೆ ಲೋಕಾಯುಕ್ತರು ಬೆಳ್ಳಂಬೆಳಿಗ್ಗೆ ರಾಯಚೂರು ಜಿಲ್ಲಾ ಪಂಚಾಯಿತಿಯ ಸಹಾಯಕ ಲೆಕ್ಕಾಧಿಕಾರಿ ನರಸಿಂಹರಾವ ಗುಜ್ಜಾರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ನಗರದ ದೇವರ ಕಾಲೋನಿಯಲ್ಲಿರುವ ಮನೆ ಮೇಲೆ ಲೋಕಾಯುಕ್ತ ಎಸ್ಪಿ ಸಿದ್ದರಾಜು ಮತ್ತು ಡಿವೈಎಸ್ಪಿ ಶೈಲಜಾ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿದೆ.ಬ್ಯಾಂಕ್ ದಾಖಲೆಗಳು,ಆಸ್ತಿಗೆ ಸಂಭಂದಿಸಿದ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಕಚೇರಿ ಸೇರಿದಂತೆ ಇತರೆ ಕಡೆಯೂ ಪರಿಶೀಲನೆ ನಡೆಸುವ ಸಾಧ್ಯತೆಯಿದೆ. ನರಸಿಂಹರಾವ ಗುಜ್ಜಾರ ಬೆಂಗಳೂರಿಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ವರದಿ : ಗಾರಲ ದಿನ್ನಿ ವೀರನ ಗೌಡ