ಸೇಡಂ:ತಾಲೂಕಿಗೆ ಒಳಪಡುವ ಮಳಖೆಡ್ ಮತ್ತು ಕುರಕುಂಟಾ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ ಸಿಬ್ಬಂದಿಗಳಿಗೆ ನೂತನ ವಸತಿಗೃಹಗಳ ಸೌಲಭ್ಯ ಒದಗಿಸಿಬೇಕೆಂದು ಮಾನ್ಯ ಪೊಲೀಸ ಅಧಿಕ್ಷಕರು ಕಲಬುರ್ಗಿ ರವರಿಗೆ
ಡಾ,ರಾಮಚಂದ್ರ ಗುತ್ತೇದಾರ ಕರವೇ ಸೇಡಂ ತಾಲೂಕಾಧ್ಯಕ್ಷರು ಮನವಿ ಪತ್ರನೀಡಿ ಮಾತನಾಡಿ
ಪಟ್ಟಣದ ಬಸವೇಶ್ವರ ವೃತ್ತದಿಂದ ವಾಸವದತ್ತ ಸಿಮೆಂಟ್ ಕಾರ್ಖಾನೆವರೆಗೆ ಚತುಸ್ಪತ ರಸ್ತೆ ಇದ್ದರು ಕೂಡ ಎಡಭಾಗ ಮತ್ತು ಬಲಭಾಗಕ್ಕೆ ಆಂಧ್ರ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಗೋವಾ, ಮೂಲದ ಟ್ರಕ್ ಗಳು ಸಿಮೆಂಟ್ ಕಂಪನಿಗೆ ಲೋಡಿಂಗ್ ಮಾಡಿಕೊಳ್ಳಲು ರಸ್ತೆ ಬದಿ ಯಲ್ಲಿ ನಿಲ್ಲುಸುವುದರಿಂದ ಸಂಚಾರ ಮಾಡುವ ವಾಹನಗಳಿಗೆ ತೊಂದರೆಯಾಗುತ್ತಿದ್ದೂ
ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಆದ್ದರಿಂದ ಟ್ರಕ್ ಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸದೆ ಬೇರೆಕಡೆ ನಿಲ್ಲಿಸಲು ವ್ಯವಸ್ಥೆ ಮಾಡಬೇಕು.
ಸೇಡಂ ದಿಂದ ಹೈದ್ರಾಬಾದ್ ಹೋಗುವ ರಾಜ್ಯಹೆದ್ದಾರಿ ರಸ್ತೆಗೆ ಅಂಟಿಕೊಂಡಿರುವ ರಂಜೋಳ್ ಗ್ರಾಮದ ರಸ್ತೆಯ ಕ್ರಾಸ್ ಬಳಿ ತಿಂಗಳಿಗೆ ಮೂರು ನಾಲ್ಕು ಅಪಘಾತ ಗಳು ಸಂಭವಿಸುತ್ತಿವೆ ಆದ ಕಾರಣ ರಾಜ್ಯ ಹೆದ್ದಾರಿಗೆ ಆದಷ್ಟು ಬೇಗನೆ ರೋಡ್ ಬ್ರೇಕರ ಗಳನ್ನು ಅಳವಡಿಸಬೇಕು ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಗೋಪಾಲ ನಟೆಕಾರ್ ಕರವೇ ಕಲ್ಯಾಣ ಕರ್ನಾಟಕ ವಿಭಾಗದ ಪ್ರಧಾನ ಕಾರ್ಯದರ್ಶಿ, ವಿಶ್ವನಾಥ್ ಪಾಟೀಲ ಜಿಲ್ಲಾಧ್ಯಕ್ಷರು ಕಲಬುರ್ಗಿ, ರಾಜಶೇಖರ ಬಂಟನೂರ, ಚಂದ್ರಶೇಖರ ಮಡಿವಾಳ, ಸತೀಶ ಬಿರನೂರ,
ನಿಜಲಿಂಗ ಸ್ವಾಮಿ, ವಾಸುದೇವ, ಇನ್ನಿತರರು ಇದ್ದರು
ವರದಿ: ವೆಂಕಟಪ್ಪ ಕೆ ಸುಗ್ಗಾಲ್




