
ಮುಂಬೈ: ಬಾಲಿವುಡ್ ಹಿರಿಯ ನಟ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ಅಹುಜಾ ಅವರು ಮುಂಬೈ ನಗರದಲ್ಲಿ ನಡೆಯುತ್ತಿರುವ ಗಣೇಶ ಚತುರ್ಥಿಗೆ ಒಟ್ಟಾಗಿ ಆಗಮಿಸುವದರ ಜೊತೆಗೆ ತಮ್ಮಿಬ್ಬರ ಕುರಿತು ಹರಡಿರುವ ವಿಚ್ಛೇದನ ಸುದ್ದಿಯನ್ನು ಬಲವಾಗಿ ನಿರಾಕರಿಸಿದ್ದಾರೆ.
ಆನ್ ಲೈನ್ ಸುದ್ದಿಯಲ್ಲಿ ತಮ್ಮಿಬ್ಬರ ದಾಂಪತ್ಯ ಜೀವನದ ಕುರಿತು ಹರಡಿರುವ ಸುದ್ದಿಯನ್ನು ಅವರು ಈ ಮೂಲಕ ಅಲ್ಲಗಳೆದಿದ್ದು, ಈ ಇಬ್ಬರು ದಂಪತಿಗಳು ಸಾಂಪ್ರದಾಯಿಕ ಬಣ್ಣದ ಉಡಿಗೆಯಲ್ಲಿ ಗಣೇಶ ಚತುರ್ಥಿ ಆಚರಣೆಗೆ ಆಗಮಿಸುವ ಮೂಲಕ ಡೈವರ್ಸ್ ವದಂತಿಗೆ ತೆರೆ ಎಳೆದಿದ್ದಾರೆ.




