Ad imageAd image

ಜೀವನ ಆನಂದಿಸಿ: ವಿವಾಹ ವಿಚ್ಛೇದನ (ಡಿವೋರ್ಸ್) ತೊಲಗಿಸಿ

Bharath Vaibhav
ಜೀವನ ಆನಂದಿಸಿ: ವಿವಾಹ ವಿಚ್ಛೇದನ (ಡಿವೋರ್ಸ್) ತೊಲಗಿಸಿ
WhatsApp Group Join Now
Telegram Group Join Now

ವಿವಾಹ ವಿಚ್ಛೇದನ ( ಡಿವೋರ್ಸ್ ) ದೊಡ್ಡ ಸಾಮಾಜಿಕ ಪಿಡುಗು. ಸಮಾಜ ಸುಸೂತ್ರವಾಗಿ ನಡೆಯಬೇಕೆಂದರೆ, ಜೀವನ ಸರಳವಾಗಿ ಸಾಗಬೇಕೆಂದರೆ ಡಿವೋರ್ಸ್ ಎಂಬ ದೊಡ್ಡ ಪಿಡುಗು ಸಮಾಜದಿಂದ ಮುಕ್ತವಾಗಬೇಕು.

ವಿವಾಹ ವಿಚ್ಛೇದನ (ಡಿವೋರ್ಸ್) ಎಂಬ ಪಿಡುಗು ಇಂದು, ನಿನ್ನೆಯದಲ್ಲ. ಆದರೆ ಹಳೆಯ ಕಾಲದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಡಿವೋರ್ಸ್ ಗಳು ನಡೆಯುತ್ತಿರಲಿಲ್ಲ. ಈಗ ಮಾತು, ಮಾತಿಗೆ ಡಿವೋರ್ಸ್ ಗಳು ನಡೆದು ಹೋಗುತ್ತವೆ.

ಪ್ರತಿಷ್ಠೆ ಕಾರಣ: ಶ್ರೀಮಂತರು, ಸೆಲೆಬ್ರೆಟಿಗಳಲ್ಲಂತೂ ಡಿವೋರ್ಸ್ ಎಂಬುದು ಚಿಟಿಕೆ ಹೊಡೆಯುವುದರಲ್ಲಿ ಮುಗಿದು ಹೋಗುವಂತ ಕೆಲಸದಂತೆ ಭಾಸವಾಗುತ್ತದೆ. ದಂಪತಿಗಳಲ್ಲಿ ಡಿವೋರ್ಸ್ ಗಳು ನಡೆದುಹೋಗಲು ಹಲವು ಕಾರಣಗಳು ಇರುತ್ತವೆ. ಕ್ಷುಲ್ಲಕ ಕಾರಣಕ್ಕೂ ಡಿವೋರ್ಸ್ ಗಳು ನಡೆಯುತ್ತವೆ. ಏಕೆಂದರೆ ಇಲ್ಲಿ ಗಂಡ ಅಥವಾ ಹೆಂಡತಿಯ ಪ್ರತಿಷ್ಠೆ ಪ್ರಮುಖ ಕಾರಣವಾಗಿರುತ್ತದೆ. ಆದರೆ ಗಂಡ- ಹೆಂಡತಿಯರಲ್ಲಿ ಡಿವೋರ್ಸ್ ಗಳು ನಡೆಯಲು ಸೆಕ್ಸ್ ಪ್ರಮುಖ ಕಾರಣವಾಗಿರುತ್ತದೆ ಎಂಬುದು ಹಲವು ಸಂಶೋಧನೆಗಳಿಂದ ಸಾಭೀತಾಗಿದೆ.

ಸಕಾರಣಗಳು: ಗಂಡ- ಹೆಂಡತಿಯನ್ನು ಬೆಡ್ ರೂಂ ನಲ್ಲಿ ತೃಪ್ತಿ ಪಡಿಸದಿದ್ದರೆ, ಗಂಡ ನಂಪುಸಕನಾಗಿದ್ದರೆ ಡಿವೋರ್ಸ್ ಗಳು ನಡೆಯುವುದು ಸಾಮಾನ್ಯ. ಅಥವಾ ಹೆಂಡತಿ- ಗಂಡನಿಗೆ ಹಾಸಿಗೆಯ ಮೇಲೆ ಸಹಕರಿಸದಿದ್ದರೆ ಕೂಡ ಡಿವೋರ್ಸ್ ಗಳು ನಡೆಯುತ್ತವೆ. ಇದು ಸಕಾರಣ ಎಂದು ಹೇಳಬಹುದು. ಗಂಡ- ಹೆಂಡತಿಯರು ಡಿವೋರ್ಸ್ ಗಾಗಿ ನ್ಯಾಯಾಲಯದ ಮೋರೆ ಹೋದಾಗ ನ್ಯಾಯಾಲಯ ಡಿವೋರ್ಸ್ ಗೆ  ಸಕಾರಣಗಳು ಇದ್ದರೆ ಮಾತ್ರ ಡಿವೋರ್ಸ್ ನೀಡಿ ಆದೇಶ ಹೊರಡಿಸುತ್ತದೆ. ನ್ಯಾಯಾಲಯ  ಸಕಾರಣವಿಲ್ಲದಿದ್ದರೆ ಡಿವೋರ್ಸ್ ನೀಡುವುದಿಲ್ಲ.

ಅಕ್ರಮ ಸಂಬಂಧಗಳೂ ಕಾರಣ:  ಪತಿ, ಪತ್ನಿಯರಲ್ಲಿ ವಿವಾಹ ವಿಚ್ಛೇದನ ನಡೆಯಲು  ಸೆಕ್ಸ್ ಹೇಗೆ ಕಾರಣವೋ ಹಾಗೆಯೇ ಅಕ್ರಮ ಸಂಬಂಧವೂ ಕಾರಣವಾಗಿರುತ್ತದೆ. ಗಂಡ ಅಕ್ರಮ ಸಂಬಂಧ ಇಟ್ಟುಕೊಂಡರೆ, ಹೆಂಡತಿ ಡಿವೋರ್ಸ್ ಗೆ ಮನಸ್ಸು ಮಾಡಬಹುದು. ಹೆಂಡತಿ ಅಕ್ರಮ ಸಂಬಂಧ ಇಟ್ಟುಕೊಂಡರೇ ಗಂಡ  ವಿಚ್ಛೇದನಕ್ಕೆ ಮುಂದಾಗಬಹುದು. ಹೀಗೆ ಅಕ್ರಮ ಸಂಬಂಧಗಳು ಗಂಡ- ಹೆಂಡತಿಯರ ವಿವಾಹ ವಿಚ್ಛೇದನಕ್ಕೆ ಕಾರಣ.

ಗಂಡಸರ ದುಶ್ಚಟಗಳು ಕಾರಣ: ಬಹುತೇಕ ಡಿವೋರ್ಸ್ ಗಳಿಗೆ ಹೆಂಡತಿಗಿಂತ ಗಂಡಸರ ವರ್ತನೆಗಳು ಕಾರಣವಾಗಿರುತ್ತವೆ. ಇದರಲ್ಲಿ ಪ್ರಮುಖವಾಗಿ ಗಂಡಸರಿಗಿರುವ ದುಶ್ಚಟಗಳು. ದುಶ್ಚಟಗಳಿಂದ ಗಂಡಸರು ಸಮರ್ಥವಾಗಿ ಹೆಂಡತಿಯನ್ನು ಹಾಸಿಗೆಯ ಮೇಲೆ ತೃಪ್ತಿ ಪಡಿಸಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ದುಶ್ಚಟಗಳಿಂದ ಗಂಡಸರು ತಮ್ಮ ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ, ಪೋಷಣೆ ಮಾಡಲು ಅಸಮರ್ಥರಾಗುತ್ತಾರೆ. ಇದರಿಂದ ಕೌಟುಂಬಿಕ ಕಲಹಗಳು ಉಂಟಾಗಿ ದಂಪತಿಗಳಲ್ಲಿ ಡಿವೋರ್ಸ್ ಗಳು ನಡೆದುಹೋಗುತ್ತವೆ

ಜೀವನ ಆನಂದಿಸುವ ಇಚ್ಛೆ ಇರಬೇಕು: ದಂಪತಿಗಳಲ್ಲಿ ಜೀವನ ಆನಂದಿಸುವ ಇಚ್ಛೆ ಇರಬೇಕು. ದೇವರು ದಯಪಾಲಿಸಿರುವ ಜೀವನವನ್ನು ( ಸೆಕ್ಸ್ ಲೈಪ್) ಅನ್ನು ಎಂಜಾಯ ಮಾಡುವ ಇರಾದೆ ಗಂಡ- ಹೆಂಡತಿಯರಲ್ಲಿ ಇದ್ದರೆ ಜೀವನ ಸರಿಯಾದ ದಾರಿಯಲ್ಲಿ ಸಾಗುತ್ತದೆ. ಆಗ ದೊಡ್ಡ ಸಾಮಾಜಿಕ ಪಿಡುಗಾಗಿರುವ ವಿವಾಹ ವಿಚ್ಛೇದನವನ್ನು ತಡೆಯಲು ಸಾಧ್ಯ. ಜೀವನ ಆನಂದಿಸುವ ಇಚ್ಛೆ ಇದ್ದರೆ ಗಂಡ- ಹೆಂಡತಿಯರು ತಮ್ಮ ಜೀವನ ಜವಾಬ್ದಾರಿಗಳಾದ ಮಕ್ಕಳ ಪಾಲನೆ, ಪೋಷಣೆ, ಶಿಕ್ಷಣ ಹಾಗೂ ಮಕ್ಕಳ  ಎಲ್ಲ ಜವಾಬ್ದಾರಿಗಳನ್ನು  ಅಚ್ಚುಕಟ್ಟಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!