ಅಸ್ಸಾಂನ ವ್ಯಕ್ತಿಯೊಬ್ಬ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿ ತನ್ನ ವಿಚ್ಛೇದನ ಸಂಭ್ರಮ ಆಚರಿಸಿಕೊಂಡಿದ್ದು, ಕ್ಯಾಮೆರಾ ಮುಂದೆ, “ಇಂದಿನಿಂದ ನಾನು ಸ್ವತಂತ್ರ!” ಎಂದು ಘೋಷಿಸಿದ್ದಾನೆ.
ನಲ್ಬರಿ ಜಿಲ್ಲೆಯ ನಿವಾಸಿ ಮಾಣಿಕ್ ಅಲಿ ಎಂದು ಗುರುತಿಸಲಾದ ವ್ಯಕ್ತಿ ತನ್ನ “ಸ್ವಾತಂತ್ರ್ಯ”ವನ್ನು ಅಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲು ಆಯ್ಕೆ ಮಾಡಿಕೊಂಡಿದ್ದಾನೆ.ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ, ಅಲಿ ತನ್ನ ಮನೆಯ ಹೊರಗೆ ನಾಲ್ಕು ಬಕೆಟ್ ಹಾಲಿನೊಂದಿಗೆ ಪ್ಲಾಸ್ಟಿಕ್ ಹಾಳೆಯ ಮೇಲೆ ನಿಂತಿರುವುದನ್ನು ಕಾಣಬಹುದು. ಸ್ನಾನ ಮಾಡಲು ಒಂದರ ನಂತರ ಒಂದರಂತೆ ಬಕೆಟ್ ಬಳಸಿದ್ದಾನೆ ಮತ್ತು ತನ್ನ ವಿಚ್ಛೇದನವನ್ನು ಸಂಭ್ರಮದಿಂದ ಆಚರಿಸಿದ್ದಾನೆ.
ನಾನು ಇಂದಿನಿಂದ ಮುಕ್ತನಾಗಿದ್ದೇನೆ. ಅವಳು ತನ್ನ ಪ್ರೇಮಿಯೊಂದಿಗೆ ಓಡಿಹೋಗುತ್ತಲೇ ಇದ್ದಳು. ನಮ್ಮ ಕುಟುಂಬದ ಶಾಂತಿಗಾಗಿ ನಾನು ಮೌನವಾಗಿದ್ದೆ ಎಂದು ಕಿರುಚಿದ್ದಾನೆ. ಅಲಿ ತನ್ನ ಹೆಂಡತಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಮತ್ತು ತನ್ನ ಪ್ರೇಮಿಯೊಂದಿಗೆ ಹಲವಾರು ಬಾರಿ ಓಡಿಹೋಗಿದ್ದಾಳೆ ಎಂದು ಹೇಳಿಕೊಂಡಿದ್ದಾನೆ.
ಪತ್ನಿಯ ನಿರ್ಧಾರಕ್ಕೆ ವಿರುದ್ಧವಾಗಿ ಅಲಿ ‘ತಮ್ಮ ಮಗಳ ಸಲುವಾಗಿ’ ಸಂಬಂಧ ‘ಉಳಿಸಲು’ ಪ್ರಯತ್ನಿಸುತ್ತಿದ್ದರು. ಆದಾಗ್ಯೂ, ಏನೂ ಬದಲಾಗದಿದ್ದಾಗ, ಇಬ್ಬರೂ ಅಂತಿಮವಾಗಿ ವಿಚ್ಛೇದನ ಪಡೆದರು.
ಕಾನೂನು ಪ್ರಕ್ರಿಯೆಗಳು ಮುಗಿದ ನಂತರ, ಕ್ಯಾಮೆರಾಗಳ ಮುಂದೆ ನಾಲ್ಕು ಬಕೆಟ್(ಸುಮಾರು 40 ಲೀಟರ್) ಹಾಲನ್ನು ತನ್ನ ಮೇಲೆ ಸುರಿಯುವ ಮೂಲಕ ಆ ಸಂದರ್ಭವನ್ನು ಸ್ಮರಣೀಯವಾಗಿಸಲು ಅವನು ನಿರ್ಧರಿಸಿ ಹೀಗೆ ಮಾಡಿದ್ದಾನೆ.




