ನಿಪ್ಪಾಣಿ :ದಿವಾನ್ ಬಹದ್ದೂರ್ ಅಣ್ಣಾಸಾಹೇಬ ಲಟ್ಟೆ ಹಾಗೂ ಭೂದಾನಿಗಳಾದ ರತ್ನಪ್ಪಾ ಶೆಟ್ಟಿ ಅವರ ಕಾರ್ಯ ಅವಿಸ್ಮರಣೀಯ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಡಾ. ಭರತ ಲಟ್ಟೆ ಅಭಿಮತ.
ಕರ್ನಾಟಕ ಹಾಗು ಮಹಾರಾಷ್ಟ್ರ ರಾಜ್ಯಗಳಲ್ಲಿಯ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ 1952 ರಲ್ಲಿ ಸಾಂಗ್ಲಿಯ ದಿವಾನ್ ಬಹದ್ದೂರ್ ಅನ್ನಾಸಾಹೇಬ ಲಟ್ಟೆ ಹಾಗೂ ಭೂದಾನಿ ರತ್ನಪ್ಪಾ ಶೆಟ್ಟಿಯವರು ಸ್ಥಾಪಿಸಿದ ಲಟ್ಟೆ ಶಿಕ್ಷಣ ಸಂಸ್ಥೆ ಇಂದು ಹೆಮ್ಮೆರವಾಗಿ ಬೆಳೆಯುತ್ತಿದ್ದು ,ಮಹಾನ್ ಮೇಧಾವಿಗಳಾದ ಇವರ ಕಾರ್ಯ ಅವಿಸ್ಮರನೀಯ ಎಂದು ಲಟ್ಟೆ ಫೌಂಡೇಶನ್ ಅಧ್ಯಕ್ಷ ಡಾ. ಭರತ ಲಟ್ಟೆ ತಿಳಿಸಿದರು. ಅವರು ನಿಪ್ಪಾಣಿ ತಾಲೂಕಿನ ಬೇಡಕಿ ಹಾಳ ಗ್ರಾಮದ ಬಿ.ಎಸ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಾರಂಭದಲ್ಲಿ ಅನ್ನಾಸಾಹೇಬ ಲಟ್ಟೆಯವರ ಪುತ್ಥಳಿಯನ್ನು ಭರತ ಲಟ್ಟೆಯವರ ಹಸ್ತದಿಂದ ಹಾಗೂ ಭೂದಾನಿ ರತ್ನಪ್ಪಾ ಶೆಟ್ಟಿ ಅವರ ಪುತ್ತಳಿಯನ್ನು ಶಾಂತಿನಾಥ ಕಾಂತೆ ಅವರ ಹಸ್ತದಿಂದ ಉದ್ಘಾಟಿಸಲಾಯಿತು. ಲಟ್ಟೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುಹಾಸ್ ಪಾಟೀಲ್ ನೂತನ ಕೊಠಡಿಗಳ ಉದ್ಘಾಟನೆ ಮಾಡಿದರು.

ಸಮಾರಂಭದಲ್ಲಿ ನ್ಯಾಯವಾದಿ ಪಿ.ಆರ್ ಪಾಟೀಲ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಂತಿನಾಥ ಕಾಂತೆ ಮಾತನಾಡಿದರು. ಸಮಾರಂಭದಲ್ಲಿ ಚಂದ್ರಕಾಂತ ಪಾಟೀಲ್ ಬಾಲಚಂದ್ರ ಪಾಟೀಲ್ ಡಾ. ಪ್ರಮೋದ್ ಚೌಗುಲೆ ಸುಧೀರ್ ಶೆಟ್ಟಿ ಬಾಳಾ ಸಾಹೇಬ್ ಪಾಟೀಲ್ ಸಂಜಯ ಲಟ್ಟೆ ಅರುಣ್ ಶೆಟ್ಟಿ ರಿಷಬ್ ಶೆಟ್ಟಿ ಬಿ ಎ ಪಾಟೀಲ ಡಾಕ್ಟರ್ ವಿಲಾಸ್ ಜೋಶಿ ಪಾಸ್ ಗೌಡ ಪಾಟೀಲ, ಜೈಕುಮಾರ ಖೋತ, ಸಂದೀಪ್ ಪಾಟೀಲ, ಬಾಳಾಸಾಹೇಬ ಪಾಟೀಲ ನಾಬಿರಾಜ್ ಖೋತ,ಪ್ರಕಾಶ್ ಪಾಟೀಲ್, ಡಿ .ಎಸ್ ಪಾಟೀಲ, ಡಾ. ಧೀರಜ ಪಾಟೀಲ, ಜೆ. ಎ. ಪಾಟೀಲ, ವಿಪುಲ ಸದಲಗೆ,ತಾತ್ಯಾಸಾಹೇಬ ಚೌಗುಲೆ ಭರತ ಖೋತ ಸೇರಿದಂತೆ ಗಣ್ಯರು ಉಪಸ್ಥತರಿಸಿದರು.
ವರದಿ:ಮಹಾವೀರ ಚಿಂಚಣೆ




