—————————————–ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕಾರಿ ಹರೀಷ
ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಶಾಂತಿ ಪಾಲನಾ ಸಭೆಯಲ್ಲಿ ಪಾಲ್ಗೊಂಡ ರಾಯಚೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕಾರಿ ಹರೀಶ್ ಜಿ, ಲಿಂಗಸ್ಗೂರು ಉಪ ವಿಭಾಗದ ಡಿ ವೈ ಎಸ್ ಪಿ ದತ್ತಾತ್ರೇಯ, ಕಾರ್ನಾಡ್, ಲಿಂಗಸ್ಗೂರು ತಹಸಿಲ್ದಾರ್ ಸತ್ಯಮ್ಮ, ಹಟ್ಟಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ, ಲಿಂಗಸುಗೂರು ಸರ್ಕಲ್ ಇನ್ಸ್ಪೆಕ್ಟರ್ ಪುಂಡಲಿಕ್, ಹಟ್ಟಿ ಕಂಪನಿಯ ಅಧಿಕಾರಿಯಾದ ಜಗನ್ ಮೋಹನ್, ಹಟ್ಟಿ ಚಿನ್ನದ ಗಣಿ ಕಂಪನಿಯ ಭದ್ರತಾ ಅಧಿಕಾರಿ, ಜೆಸ್ಕಾಂ,ಅಬಕಾರಿ ಇಲಾಖೆಯ , ಪಟ್ಟಣ ಪಂಚಾಯತಿಯ ಅಧಿಕಾರಿಗಳು, ಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಧರ್ಮಣ್ಣ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಸಭೆಯಲ್ಲಿ ಹಿಂದೂ ಮುಸ್ಲಿಂ ಧರ್ಮದ ಎಲ್ಲಾ ಮುಖಂಡರು ಪಾಲ್ಗೊಂಡಿದ್ದರು. ಚಿನ್ನದ ನಾಡಿನಲ್ಲಿ ಗಣೇಶ್ ಚತುರ್ಥಿ, ಈದ್ ಮಿಲಾದ್ ಹಬ್ಬವು ಎರಡು ಧರ್ಮದವರು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಬೇಕು, ಗಣೇಶನ ಮೂರ್ತಿ ಪ್ರತಿಷ್ಠಾಪಿಸುವ ಗಣೇಶ ಭಕ್ತರು ಮುಂಜಾಗ್ರತೆ ಕ್ರಮವಾಗಿ ಕೂಡಿಸುವ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಬೇಕು ಮತ್ತು ಸಂಬಂಧಪಟ್ಟ ಇಲಾಖೆಯವರಿಂದ ಪರವಾನಿಗೆ ಪಡೆದುಕೊಳ್ಳಬೇಕು, ಗಣೇಶ ವಿಸರ್ಜನೆ ವೇಳೆಯಲ್ಲಿ ಡಿಜೆ ಸೌಂಡ್ ಅನುಮತಿ ಇಲ್ಲ. ಪ್ರಚೋದನೆಕಾರಿ ಭಾಷಣವಾಗಲಿ ಅಥವಾ ಹಾಡು ಹಾಕುವಂತಿಲ್ಲ , ಗಣೇಶ ಉತ್ಸವಕ್ಕೆ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆಯನ್ನು ಒದಗಿಸಲಾಗುವುದು ಮತ್ತು ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಪ್ರತಿಮೆಯನ್ನು ಸಾರ್ವಜನಿಕರ ರಸ್ತೆಯಲ್ಲಿ ಪ್ರತಿಷ್ಠಾಪನೆ ಮಾಡಬಾರದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಹಟ್ಟಿ ಅನ್ನುವುದು ಸಣ್ಣ ಭಾರತ ಇದ್ದ ಹಾಗೆ ನನ್ನ ಪ್ರೀತಿಯ ಊರು ಹಟ್ಟಿ ನಾನು ಹಟ್ಟಿ ಠಾಣೆಯಲ್ಲಿ 15 ವರ್ಷಗಳ ಹಿಂದೆ ಇಲ್ಲಿ ಕರ್ತವ್ಯ ನಿರ್ವಹಿಸಿದ್ದು ಇಲ್ಲಿಯ ಜನ ಮತ್ತು ಯುವಕರು ಒಳ್ಳೆಯವರಾಗಿದ್ದಾರೆ ಯಾವುದೇ ರೀತಿಯ ಘಟನೆಗೆ ಆಸ್ಪದ ಕೊಡುವುದಿಲ್ಲ, ಶಾಂತಿ ಸುವ್ಯವಸ್ಥೆಗೆ ತೊಂದರೆಯಾದರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು, ಶಾಂತಿಯುತವಾಗಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಆಚರಿಸಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಟ್ಟಿ ಪೊಲೀಸ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ ಮಾತನಾಡಿ ಶಾಂತಿ ಸುವ್ಯವಸ್ತೆಯಿಂದ ಗಣಪತಿ ಹಬ್ಬವನ್ನು ಆಚರಿಸಿ ಗಣಪತಿ ವಿಸರ್ಜನೆ ವೇಳೆಯಲ್ಲಿ ಗಣೇಶ್ ಮಂಡಳಿಯವರು ಕೂಡಲೇ ರಾತ್ರಿ 12 ಗಂಟೆ ಒಳಗಾಗಿ ಗಣಪತಿ ವಿಸರ್ಜನೆ ಮಾಡಬೇಕು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ನೀವು ಮುಂಜಾಗ್ರತೆ ಕ್ರಮವನ್ನು ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಂಶುದ್ದೀನ್ ವಕೀಲರು, ಅಂಜುಮನ್ ಕಮಿಟಿ ಅಧ್ಯಕ್ಷರು, ಬಸವರಾಜ್ ಗುರಿಕಾರ್, ಗುಂಡಪ್ಪ ಗುರಿಕಾರ್, ಬಾಲಪ್ಪ ನಾಯಕ್, ಜಮದಗ್ನಿಕೋಟ, ಶ್ರೀರಾಮ ಸೇನೆಯ ಅಧ್ಯಕ್ಷ ರಘು ಗೌಡ, ಲಿಂಗಪ್ಪ ಹೆಚ್ ಎ, ಮೌಲಾ ಮಾಸ್ಟರ್, ಸಿರಾಜುದ್ದೀನ್ ಖುರೇಷಿ, ಶೇಕ್ ಹುಸೇನ್ ಸೌದಾಗರ್ ಸೇರಿದಂತೆ ಇನ್ನು ಅನೇಕ ಮುಖಂಡರು ಮತ್ತು ಯುವಕರು ಉಪಸ್ಥಿತರಿದ್ದರು.




