Ad imageAd image

ಈಗ ಡಿಕೆ ಡಿಕೆ ಅನ್ನೋದು ಅಲ್ಲ : ಮತ್ತೆ ಸಿಎಂ ಆಸೆ ಬಿಚ್ಚಿಟ್ಟ ಡಿಕೆಶಿ

Bharath Vaibhav
ಈಗ ಡಿಕೆ ಡಿಕೆ ಅನ್ನೋದು ಅಲ್ಲ : ಮತ್ತೆ ಸಿಎಂ ಆಸೆ ಬಿಚ್ಚಿಟ್ಟ ಡಿಕೆಶಿ
DKS
WhatsApp Group Join Now
Telegram Group Join Now

ಬೆಂಗಳೂರು : ಕೇವಲ ಡಿಕೆ ಡಿಕೆ ಎಂದು ಘೋಷಣೆ ಕೂಗೋದಲ್ಲ. ಮುಂದಿನ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿ ಇನ್ನೊಂದು ಚಾನ್ಸ್ ಕೊಡಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರೋಕ್ಷವಾಗಿ ತಾವು ಮುಖ್ಯಮಂತ್ರಿ ಆಗುವ ಕನಸನ್ನು ಬಿಚ್ಚಿಟ್ಟಿದ್ದಾರೆ.

ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೆಪಿಟಿಸಿಎಲ್ (KPTCL) ನೌಕರರ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದ ವೇಳೆ ಡಿಕೆ ಶಿವಕುಮಾರ್ ಭಾಷಣ ಮಾಡಲು ಬಂದ ಕೂಡಲೇ ವಿದ್ಯುತ್ ಇಲಾಖೆ ಸಿಬ್ಬಂದಿಗಳು, ನೌಕರರು ಡಿಕೆ ಡಿಕೆ ಅಂತ ಘೋಷಣೆ ಕೂಗಿದರು.

ಈ ವೇಳೆ ಮಾತಾನಾಡಿದ ಡಿಕೆ ಶಿವಕುಮಾರ್ ಈಗ ಡಿಕೆ ಡಿಕೆ ಅನ್ನೋದು ಅಲ್ಲ. ಎಲೆಕ್ಷನ್ ‌ನಲ್ಲಿ ಇನ್ನೊಂದು ಸಾರಿ ಡಿಕೆ ಶಿವಕುಮಾರ್ ತಂದು ಕೂರಿಸಿದ ಮೇಲೆ ಈ ಘೋಷಣೆ ಕೂಗಿ ಎಂದರು.

ತಾವು ಇಂಧನ ಇಲಾಖೆ ಸಚಿವನಾಗಿ ಇದ್ದಾಗ ಮಾಡಿದ ಸಾಧನೆ ಹೇಳಿದ್ರು. ನೀವು ಮನಸ್ಸು ಮಾಡಿದ್ರೆ ಡಿಕೆ ಶಿವಕುಮಾರ್‌ನನ್ನು ಮೇಲಕ್ಕೆ ಎತ್ತಬಹುದು. ಕೆಳಗೆ ಇಳಿಸಬಹುದು.

ಅಷ್ಟು ಶಕ್ತಿ ನಿಮಗೆ ಇದೆ.
ನಾವು ನಿಮಗೆ ಎಲ್ಲಾ ಮಾಡಿದ್ದೇವೆ. ನಿಮಗೆ ನಮ್ಮ ಮೇಲೆ ಉಪಕಾರ ಸ್ಮರಣೆ ಇರಬೇಕು. ಬರೀ ಡಿಕೆ ಡಿಕೆ ಅನ್ನೋದಲ್ಲ. ಈ ಸರ್ಕಾರವನ್ನು ತಂದು ಕೂರಿಸಬೇಕು ಎನ್ನುವ ಮೂಲಕ ತಮ್ಮ ಸಿಎಂ ಕನಸನ್ನು ಬಿಚ್ಚಿಟ್ಟಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!