ಬೆಂಗಳೂರು : ನಟ ದರ್ಶನ್ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಲ್ಲ, ಪ್ರಕರಣ ಸಂಬಂಧ ಕಾನೂನು ಕ್ರಮ ನಡೆಯುತ್ತಿದೆ, ಇಂದು ನಮ್ಮನ್ನು ಭೇಟಿಯಾದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ತಮ್ಮ ಪುತ್ರನ ಶಾಲೆಯ ಸೇರ್ಪಡೆ ಬಗ್ಗೆ ಮಾತ್ರ ಚರ್ಚೆ ಮಾಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಮ್ಮ ಭೇಟಿ ನೀಡಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ತಮ್ಮ ಮಗನನ್ನು ಬೇರೆ ಸ್ಕೂಲ್ ಸೇರಿಸಿದ್ದರು. ಈಗ ಪುತ್ರನನ್ನು ನಮ್ಮ ಶಾಲೆಗೆ ಸೇರಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ ದರ್ಶನ್ ಬಗ್ಗೆ ಏನೂ ಮಾತನಾಡಿಲ್ಲ.
ಕೇವಲ ತಮ್ಮ ಮಗನ ಸ್ಕೂಲ್ ಸೇರ್ಪಡೆ ಕುರಿತು ಚರ್ಚೆ ನಡೆಸಿದ್ದಾರೆ. ದರ್ಶನ್ ಪ್ರಕರಣ ತನಿಖೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಇನ್ನು ನಿನ್ನೆ ರಾಮನಗರದ ಕರಗಕ್ಕೆ ಹೋದಾಗ ಅಭಿಮಾನಿಗಳು ಡಿಬಾಸ್ ಅಂತ ಘೋಷಣೆ ಕೂಗಿದ್ದರು. ಏನಾದರೂ ಅನ್ಯಾಯ ಆಗಿದ್ದರೆ ಸರಿಪಡಿಸಲಾಗುವುದು ಎಂದು ಹೇಳಿದ್ದೆ ಎಂದರು.