ಬೆಂಗಳೂರು : ವಿರೋಧ ಪಕ್ಷ ಬಿಜೆಪಿ ವಿರುದ್ಧ ಡಿಸಿಎಂ ಡಿಕೆಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಕ್ಫ್ ವಿಚಾರವಾಗಿ ಬಿಜೆಪಿ ಹಮ್ಮಿಕೊಳ್ಳುತ್ತಿರುವ ಜಾಗೃತಿ ಅಭಿಯಾನದ ಕುರಿತು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಡಿಸಿಎಂ ಡಿಕೆಶಿ, ಬಿಜೆಪಿ ಆರೋಪದಲ್ಲಿ ಯಾವುದೇ ಹುರುಳಿಲ್ಲ.ವಕ್ಫ್ ವಿಚಾರವಾಗಿ ಅನಗತ್ಯ ಗೊಂದಲ ಸೃಷ್ಟಿಮಾಡುತ್ತಿದೆ ಎಂದು ಕಿಡಿಕಾರಿದರು.
ಅಭಿಯಾನ ಅನ್ನೋದೇ ಬಿಜೆಪಿ ಮೂರ್ಖತನ. ಬಿಜೆಪಿ ಕಾಲದಲ್ಲಿ ವಕ್ಫ್ ಪಹಣಿಗಳು ಚೇಂಜ್ ಆಗಿದೆ. ಈಗಾಗಲೇ ಎಲ್ಲಾ ದಾಖಲೆಗಳು ಸಂಗ್ರಹವಾಗಿದೆ. ಬಿಜೆಪಿಯವರ ನಿಜಬಣ್ಣ ಬಯಲು ಮಾಡುತ್ತೇವೆ ಎಂದು ಹೇಳಿದರು.
ಸರಕಾರ ಬೀಳಿಸಲು 1 ಸಾವಿರ ಕೋಟಿ ವಸೂಲಿ ಮಾಡಲಾಗಿದೆ ಎಂದು ಯತ್ನಾಳ್ ಹೇಳಿದ್ದಾರೆ. ಯತ್ನಾಳ್ ದಡ್ಡರಲ್ಲ. ಕೇಂದ್ರ ಸಚಿವರಾಗಿದ್ದ ಯತ್ನಾಳ್ ಸುಮ್ಮನೆ ಹೇಳೋದಿಲ್ಲ. ಈ ಹಿಂದೆ ಮುಖ್ಯಮಂತ್ರಿ ಹುದ್ದೆ ಪಡೆಯಲು ಎರಡೂವರೆ ಸಾವಿರ ಕೋಟಿ ನೀಡಿದ್ದಾರೆ ಎಂದು ಹೇಳಿದ್ದರು. ಇದೆಲ್ಲದಕ್ಕೂ ಯತ್ನಾಳ್ ಸಾಕ್ಷಿ ಕೊಡಬೇಕು ಎಂದು ಡಿಕೆಶಿ ಒತ್ತಾಯಿಸಿದರು.
ಕೋವಿಡ್ ಹಗರಣದ ಬಗ್ಗೆ ವರದಿ ರೆಡಿ ಇದೆ. ಎಲ್ಲಾ ಪ್ರಕ್ರಿಯೆ ಪಾಲಿಸಿ ಉನ್ನತ ಮಟ್ಟದ ತನಿಖೆ ನಡೆಸೋದಾಗಿ ಡಿಸಿಎಂ ಡಿಕೆಶಿ ಹೇಳಿದರು.