ಬಳ್ಳಾರಿ ‘ ಕಳೆದ ವಾರ ಮಾಧ್ಯಮಗಳ ಮುಂದೆ ಡಿಕೆ ಶಿವಕುಮಾರ್ ಕೈ ಎತ್ತುವ ಮೂಲಕ ಸಿಎಂ ಸಿದ್ದರಾಮಯ್ಯ ದೊಡ್ಡ ಸಂದೇಶ ರವಾನಿಸಿದ್ದರು. ವಿಪಕ್ಷಗಳಿಗೆ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ಕೊಟ್ಟಿದ್ದಾರೆ.
ಕಾಂಗ್ರೆಸ್‌ನಲ್ಲಿ ಕುರ್ಚಿ ಕಾಳಗ ನಡೀತಿದೆ, ಸಿದ್ದು-ಡಿಕೆಶಿ ಮಧ್ಯೆ ಜಗಳ ಶುರುವಾಗಿದೆ, ಇವರಿಬ್ಬರಿಂದ ಸರ್ಕಾರ ಪತನ ಆಗಲಿದೆ ಎನ್ನುವ ಬಿಜೆಪಿ-ಜೆಡಿಎಸ್‌ಗೆ ದೊಡ್ಡ ಸಂದೇಶ ರವಾನಿಸಿದ್ದರು.ದರೂ, ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಲೇ ಇದೆ
‘ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಆರಂಭವಾಗಿದ್ದು, ಯಾವುದೇ ಕ್ಷಣದಲ್ಲಿ ಬದಲಾದರೂ ಅಚ್ಚರಿ ಇಲ್ಲ. ಒಂದು ವೇಲೆ ಸಿಎಂ ಬದಲಾಗಲ್ಲ ಎನ್ನುವುದಾದರೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಘೋಷಿಸಲಿ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಇಬ್ಬರೂ 5 ವರ್ಷ ಸಿಎಂ ಸಿದ್ದರಾಮಯ್ಯ ಎಂದು ಅನೌನ್ಸ್ ಮಾಡಲಿ ಎಂದು ರಾಮುಲು ಹೇಳಿದ್ದಾರೆ.
‘ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಎರಡೂವರೆ ವರ್ಷ ಪೂರೈಸುತ್ತಿದೆ. ಒಪ್ಪಂದದ ಪ್ರಕಾರ ಸಿಎಂ ಬದಲಾವಣೆಯಾಗಬೇಕು. ಆದ್ದರಿಂದ ಸಿಎಂ ಹಾಗೂ ಡಿಸಿಎಂ ಮಧ್ಯೆ ಕಿತ್ತಾಟ ನಡೆಯುತ್ತಿದೆ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಬಾಂಬ್ ಸಿಡಿಸಿದ್ದಾರೆ.
‘ಡಿ.ಕೆ ಶಿವಕುಮಾರ್ ಸಿಎಂ ಆಗೋದಿಲ್ಲ’ ಎಂದ ಶ್ರೀರಾಮುಲು
ಸಿದ್ದರಾಮಯ್ಯ ಅಧಿಕಾರ ಬಿಡಲ್ಲ. ಹಾಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಸಿಎಂ ಪ್ರಯತ್ನ ವಿಫಲವಾಗಲಿದೆ. ನನ್ನ ಪ್ರಕಾರ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುವುದು ಅಸಾಧ್ಯ ಎಂದು ಶ್ರೀರಾಮುಲು ಹೇಳಿದ್ದಾರೆ.